ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಜರಗುವ ಧನುಪೂಜೆ ಮಹೋತ್ಸವ ಹಾಗೂ ಧನು ಮಾಸದ ವಿಶೇಷ ಭಜನೆ ಸೋಮವಾರದಿಂದ ಆರಂಭಗೊಂಡಿದೆ.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗುತ್ತಿರುವ ಧನುಪೂಜಾ ಮಹೋತ್ಸವದಲ್ಲಿ ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, 6 ಗಂಟೆಗೆ ಧನುಪೂಜೆ, 6.30ಕ್ಕೆ ಪ್ರಾತಃಕಾಲ ಪೂಜೆ,ಬಳಿಕ ಪ್ರಸಾದ ವಿತರಣೆ ಉಪಹಾರ ಜರಗಲಿದೆ. ತಿಂಗಳ ಪರ್ಯಂತ ಜರಗುವ ಧನುಪೂಜಾ ಮಹೋತ್ಸವದ ಯಶಸ್ವಿಗೆ ಕ್ಷೇತ್ರ ಉತ್ಸವ ಸಮಿತಿ ಹಾಗೂ ಆಡಳಿತ ಮಂಡಳಿ, ಊರ ಭಗವ್ಬಕ್ತರು, ವಿವಿಧ ಸಂಘ ಸಂಸ್ಥೆಗಳು ಸಹಕರಿಸುತ್ತಿದೆ ಎಂದು ಕ್ಷೇತ್ರ ಆಡಳಿತ ಮೊಕ್ತೇಸರ ಪಡ್ಡಂಬೈಲು ತಾರನಾಥ ರೈ ಪೆರ್ಲ ತಿಳಿಸಿದ್ದಾರೆ.

.jpg)
