HEALTH TIPS

ಯಕ್ಷಗಾನ ಅರ್ಥಧಾರಿ, ಹಿಂದಿ ಪಂಡಿತ ಪೆರ್ಲ ಕೃಷ್ಣ ಭಟ್ಟ ಜನ್ಮ ಶತಮಾನೋತ್ಸವ ಸಂಭ್ರಮ

ಪೆರ್ಲ: ಯಕ್ಷಗಾನ ತಾಳಮದ್ದಳೆ ದಿಗ್ಗಜ, ಹಿಂದಿ ಪಂಡಿತರೆಂದೇ ಖ್ಯಾತಿ ಪಡೆದಿರುವ ದಿ. ಪೆರ್ಲ ಕೃಷ್ಣ ಭಟ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ  ಡಿ.21ರಂದು ಮಧ್ಯಾಹ್ನ 2ಗಂಟೆಗೆ ಪೆರ್ಲದ ಶ್ರೀ ಭಾರತೀ ಸದನದಲ್ಲಿ ಜರುಗಲಿದೆ. 

ಪೆರ್ಲ ಕೃಷ್ಣ ಭಟ್ಟ ಅವರದ್ದು,  ಕೇರಳ-ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಕರಾವಳಿ ಪ್ರದೇಶದ ಸಾಂಸ್ಕøತಿಕ ರಂಗದಲ್ಲಿ ಹಳೆತಲೆಮಾರಿನವರಿಗೆ ಚಿರಪರಿಚಿತ ಹೆಸರು. 


ಸಾಹಿತಿಯಾಗಿ, ಉಪನ್ಯಾಸಕಾರರಾಗಿ, ಯP್ಷÀಗಾನ ತಾಳಮದ್ದಳೆಯ ಅರ್ಥಧಾರಿಯಾಗಿ, ಕನ್ನಡ ಪರ ಹೋರಾಟಗಾರರಾಗಿ, ಭಾಷಾ ಶುದ್ಧಿಯ ಬಗ್ಗೆ ಇದಮಿತ್ಥಂ ಎಂದು ಹೇಳಬಲ್ಲ ಪ್ರಕಾಂಡ ಪಂಡಿತರಾಗಿ, ಅಕ್ಷರ ತಪ್ಪುಗಳಿಲ್ಲದೆ ಮುದ್ರಿಸುವ ಗುರುಕುಲ ಮುದ್ರಣಾಲಯದ ಸ್ಥಾಪಕರಾಗಿ ಅವರು ಪ್ರಸಿದ್ಧರು. ಪರಿಚಿತ ವಲಯದಲ್ಲಿ ಹಿಂದಿ ಪಂಡಿತರೆಂದೇ ಗುರುತಿಸಿಕೊಂಡಿರುವ ಇವರು ಯಕ್ಷಗಾನ ಅರ್ಥಗಾರಿಕೆಗೆ ಹೊಸ ವ್ಯಾಖ್ಯಾನ ತಂದುಕೊಟ್ಟವರು. ಓರ್ವ ಶ್ರೇಷ್ಠ ಅಧ್ಯಾಪಕ, ಕಲಾವಿದ, ಸಾಹಿತಿ, ಸಾಂಸ್ಕøತಿಕ ಕ್ರಿಯಾಶೀಲನಾಗಿ ಕೊನೆಗೆ ಸ್ವ ಉದ್ಯೋಗದಲ್ಲೂ ಯಶಸ್ಸು ಗಳಿಸಿದ್ದ ಕೃಷ್ಣ ಭಟ್ಟರ ಸಾಧನೆ ಅಸಾಮಾನ್ಯ, ಪ್ರೇರಕ ಮತ್ತು ಅಧ್ಯಯನ ಯೋಗ್ಯವಾಗಿದೆ.  ಸ್ವರ್ಗ, ಪೆರ್ಲ, ಉಕ್ಕಿನಡ್ಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಸಂಸ್ಕøತ ಶಿಕ್ಷಣಕ್ಕಾಗಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜಿನಲ್ಲಿ ಎಂಟ್ರೆನ್ಸ್ ಪರೀಕ್ಷೆಗೆ ಬರೆದು ಅ¯್ಲÉೀ ಕಲಿಯಲು ಸೇರಿಕೊಂಡರು. ಬೆಂಗಳೂರಿನ

ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ನ್ಯಾಯ ವಿದ್ವಾನ್ ಮತ್ತು ಹಿಂದೀ ಪಂಡಿತ ಪದವಿಗಳೊಂದಿಗೆ ಊರಿಗೆ ವಾಪಸಾಗಿದ್ದರು. ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಹಿಂದಿ ಪಂಡಿತರಾಗಿ ವೃತ್ತಿ ಜೀವನ ಆರಂಭಿಸಿ ಒಂದು ವರ್ಷದೊಳಗೆ  ಪೆರ್ಲದಲ್ಲಿ ಹೊಸದಾಗಿ ಆರಂಭಗೊಂಡಿದ್ದ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಹಿಂದಿ ಪಂಡಿತರಾಗಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡಿದ್ದರು.

ಎಡನೀರು ಮಠದ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀ ಕೇಶವಾನಂದಭಾರತೀ ಸ್ವಾಮೀಜಿಯರ ಇಚ್ಛೆಯಂತೆ ಆಕಾಶವಾಣಿಗಾಗಿ ಸಂಸ್ಕøತದಲ್ಲಿ ಗೀತೋಪದೇಶ, ಜರಾಸಂಧ ಮುಂತಾದ ಯP್ಷÀಗಾನ ಪ್ರಸಂಗಗಳನ್ನು ಪೆರ್ಲ ಕೃಷ್ಣ ಭಟ್ ಬರೆದಿz್ದÁರೆ. ಶ್ರೀಗಳ ಭಾಗವತಿಕೆಯಲ್ಲಿ ಅವು ಪ್ರಸಾರವಾದಾಗ ಪೆರ್ಲಕೃಷ್ಣ ಭಟ್ಟರು ಸೊಗಸಾದ ಅರ್ಥವನ್ನೂ ಹೇಳಿz್ದÁರೆ. ಹಿಂದಿ

ಪ್ರದೇಶದ ವಿದ್ವಜ್ಜನರ ಮತ್ತು ಅಧ್ಯಾಪಕರ ಸಮ್ಮೇಳನಗಳಲ್ಲಿ ಹಿಂದಿ ತಾಳಮದ್ದಳೆಯ ಪ್ರಯೋಗವನ್ನೂ ಯಶಸ್ವಿಯಾಗಿ ಸ್ನೇಹಿತರ ಕೂಟದೊಂದಿಗೆ ನಡೆಸಿz್ದÁರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಮುಖ ಉಪನ್ಯಾಸಕಾರರಾಗಿ, ಭಾಷಣಕಾರರಾಗಿ ಕಾಣಿಸಿಕೊಂಡಿದ್ದ ಕೃಷ್ಣ ಭಟ್ ಅವರು ಸಾಹಿತ್ಯ ರಚನೆಯಲ್ಲೂ ಮುಂಚೂಣಿಯಲ್ಲಿದ್ದರು. 

21ರಂದು ಶತಮಾನೋತ್ಸವ ಸಂಭ್ರಮ:

ಪೆರ್ಲ ಕೃಷ್ಣ ಭಟ್ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಖ್ಯಾತ ಅರ್ಥಧಾರಿ, ಪೆರ್ಲ ಕೃಷ್ಣ ಭಟ್ ಅವರ ಜನ್ಮಶತಮಾನೋತ್ಸವ'ಪೆರ್ಲ ನೂರರ ನೆನಪು'ಕಾರ್ಯಕ್ರಮ ಡಿ.21ರಂದು ಮಧ್ಯಾಹ್ನ 2ಗಂಟೆಗೆ ಪೆರ್ಲದ ಶ್ರೀ ಭಾರತೀ ಸದನದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ 'ಕೃಷ್ಣ ಸಂಧಾನ'ಯಕ್ಷಗಾನ ತಾಳಮದ್ದಳೆ, ಸಭಾ ಕಾರ್ಯಕ್ರಮ ನಡೆಯುವುದು.

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಐಎಎಸ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಖ್ಯಾತ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಪೆರ್ಲಪ್ರಶಸ್ತಿ ಪ್ರದಾನ ಮಾಡಲಾಗುವುದು. ಆರೆಸ್ಸೆಸ್‍ನ ಅಖಿಲಭಾರತ ಕುಟುಂಬ ಪ್ರಬೋಧಕ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಂಸ್ಮರಣಾ ಭಾಷಣ ಮಾಡುವರು. ಡಾ. ಪ್ರಭಾಕರ ಜೋಷಿ ಹಾಗೂ ಕೃಷ್ಣ ಪ್ರಸಾದ್ ಅಡ್ಯಂತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries