HEALTH TIPS

ಕಾಸರಗೋಡು ಕನ್ನಡ ಗ್ರಾಮದಲ್ಲಿ ಸಮ್ಮೇಳನದ ಸ್ಪರ್ಧಾ ವಿಜೇತರಿಗೆ ಪ್ರತಿತಿಭಾ ಪುರಸ್ಕಾರ

ಕಾಸರಗೋಡು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿμÁ್ಠನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ-2024 ಇದರ ಅಂಗವಾಗಿ ಕನ್ನಡ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ರಾಜ್ಯಮಟ್ಟದ ಚಿತ್ರರಚನೆ ಸ್ಪರ್ಧೆ ,ರಸಪ್ರಶ್ನೆ ಸ್ಪರ್ಧೆ, ಸಣ್ಣ ಕಥೆ ಹೇಳುವ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಏಕಪಾತ್ರಾಭಿನಯ ಸ್ಪರ್ಧೆ, ಕನ್ನಡ ವಾರ್ತಾ ಪತ್ರಿಕೆ ವಾಚನ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗ , ಹಿರಿಯ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ,ದ್ವಿತೀಯ, ತೃತೀಯ ಸ್ಥಾನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ,ಸ್ಮರಣಿಕೆ, ಪುಸ್ತಕಗಳೊಂದಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.


ವಿವಿಧ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಮುಂದಿನ ದ್ವಿತೀಯ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ- 2025 ಮತ್ತು ಕೇರಳ- ಕರ್ನಾಟಕ ಮಕ್ಕಳ  ಉತ್ಸವವನ್ನು 2025 ನವೆಂಬರ್ 1 ಮತ್ತು 2 ರಂದು ಎರಡು ದಿನಗಳ ಕಾಲ ಏರ್ಪಡಿಸಲಾಗುವುದು  ಈ ಕುರಿತು ವಿದ್ಯಾರ್ಥಿಗಳ, ಹೆತ್ತವರ, ಪೆÇೀಷಕರ,ಅಧ್ಯಾಪಕರಿಂದ ಸಲಹೆ ಸೂಚನೆ ಪ್ರಸ್ತಾವನೆಗಳನ್ನು ಸ್ವೀಕರಿಸಿದರು.

ಸಮ್ಮೇಳನದ ಮೊದಲ ದಿನ ಕಾಸರಗೋಡು ಜಿಲ್ಲೆಯ ಸುಮಾರು 200 ಶಾಲಾ ಕಾಲೇಜಿನ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು, ಮಕ್ಕಳ ಕವನ ,ಸಣ್ಣ ಕಥೆ ,ಚುಟುಕು ,ಪ್ರಬಂಧಗಳ ರಚನೆ, ಮಕ್ಕಳಿಂದ ಚಿತ್ರ ಕಲಾ ರಚನೆ , ಮಕ್ಕಳಿಂದ ಸಮೂಹ ಕನ್ನಡ ಗೀತಾ ಗಾಯನ , ಮಕ್ಕಳಿಂದ ಕುಣಿತಭಜನೆ, ಮಕ್ಕಳ ಯಕ್ಷಗಾನ ,ಮಕ್ಕಳ ನಾಟಕ ಪ್ರದರ್ಶನ ಹಾಗೂ ಮಕ್ಕಳಿಗಾಗಿ ತರಬೇತಿ -ಕಮ್ಮಟಗಳನ್ನು ಸಂಘಟಿಸುವುದು,  ಕೇರಳ ಕರ್ನಾಟಕ ರಾಜ್ಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವುದು. 


ಎರಡನೇ ದಿನ ಕಾಸರಗೋಡು ಕೂಡ್ಲು ರಾಮದಾಸ ನಗರದಿಂದ  ಕನ್ನಡ ಗ್ರಾಮಕ್ಕೆ ಸುಮಾರು 2000 ವಿದ್ಯಾರ್ಥಿಗಳ ,ಅಧ್ಯಾಪಕರ,ಸಾರ್ವಜನಿಕರ, ಕನ್ನಡ ಅಭಿಮಾನಿಗಳ ಬೃಹತ್ ಸಾಂಸ್ಕೃತಿಕ ಮೆರವಣಿಗೆ, ಮುಖ್ಯ ಅತಿಥಿಗಳಾಗಿ 60 ಮಂದಿ ವಿವಿಧ ಕ್ಷೇತ್ರದ ಸಾಧಕರು, ಸಮ್ಮೇಳನ ಸರ್ವಾಧ್ಯಕ್ಷರು, ಸಹ ಅಧ್ಯಕ್ಷರು, ವಿವಿಧ ಗೋಷ್ಠಿ ಅಧ್ಯಕ್ಷರು, ಸಹ ಅದ್ಯಕ್ಷರು, ಉದ್ಘಾಟಕರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಸಮ್ಮೇಳನದ ಉದ್ಘಾಟನೆ, ವಿವಿಧ ಮಳಿಗೆಗಳ ಉದ್ಘಾಟನೆ, ರಾಜ್ಯಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ, ರಾಜ್ಯಮಟ್ಟದ ವಿದ್ಯಾರ್ಥಿಗಳ ಸಣ್ಣಕಥಾ ಗೋಷ್ಠಿ, ರಾಜ್ಯಮಟ್ಟದ ಚುಟುಕು ವಾಚನ ಗೋಷ್ಠಿ,ಮಕ್ಕಳ ಸಾಹಿತ್ಯ -ವಿಶೇμÉೂೀಪನ್ಯಾಸ, ಮೊದಲ ದಿನದ ವಿವಿಧ ಸ್ಪರ್ಧೆಯ ವಿಜೇತರಾದ ಮಕ್ಕಳ ಫಲಿತಾಂಶ ಘೋಷಣೆ, ಸಮ್ಮೇಳನದ ವಿವಿಧ ಸ್ಪರ್ಧಾ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ,ರಾಷ್ಟ್ರ ರಾಜ್ಯಮಟ್ಟದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ  ಮಕ್ಕಳನ್ನು ಗುರುತಿಸಿ ಅಭಿನಂದಿಸಲಾಗುವುದು  ಎಂದು ಶಿವರಾಮ ಕಾಸರಗೋಡು ಹೇಳಿದರು.

ಮುಖ್ಯ ಅತಿಥಿಗಳಾಗಿ ಕಾಸರಗೋಡಿನ ವಿಶ್ರಾಂತ ಪ್ರಾಂಶುಪಾಲ ಡಾ. ಕೆ ಕಮಲಾಕ್ಷ ವಿದ್ಯಾನಗರ , ಕಾಸರಗೋಡು ನಗರ ಸಭೆಯ ಕೌನ್ಸಿಲರ್ ಶಾರದಾ. ಕೆ, ನಗರಸಭೆ ಮಾಜಿ ಕೌನ್ಸಿಲರ್ ಶಂಕರ್. ಕೆ ಜೆ.ಪಿ ನಗರ, ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕು. ಹರ್ಷಿತ ಪಿ . ಶ್ರೀ ಭಾರತಿ ವಿದ್ಯಾಪೀಠ  ಬದಿಯಡ್ಕ , ಸಹ ಅಧ್ಯಕ್ಷರಾದ ಕು. ಶಿವಾನಿ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈ ಸ್ಕೂಲ್ ಕೂಡ್ಲು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನಿತ್ತು ಗೌರವಿಸಿದರು. 


ಕೂಡ್ಲು ಶ್ರೀ ಗೋಪಾಲಕೃಷ್ಣ ಹೈ ಸ್ಕೂಲ್ ಅಧ್ಯಾಪಕ ಕಿರಣ್ ಪ್ರಸಾದ್ ಪಿ.ಜಿ ಕೂಡ್ಲು, ಮಂಜೇಶ್ವರ ಚಿಪ್ಪಾರು ಎಚ್. ಎ. ಯು. ಪಿ ಶಾಲೆಯ ಅಧ್ಯಾಪಕಿ ತಾಹಿರಾ .ಬಿ ಶುಭಾಶಂಸನೆ ಗೈದರು. 

ಕು. ಕೃಪಾನಿಧಿ ಕನ್ನಡ ಗ್ರಾಮ, ಕು.ಚಿತ್ರಿತ ಕೆ.ಎಂ ಅವರಿಂದ ಪ್ರಾರ್ಥನೆ, ಕಾರ್ಯದರ್ಶಿ ಕಾವ್ಯ ಕುಶಲ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಗುರುಪ್ರಸಾದ್ ಕೋಟೆಕಣಿ, ಕುಶಲ್ ಕುಮಾರ್ ಪಾರೆಕಟ್ಟೆ, ಜಗದೀಶ್ ಕೂಡ್ಲು,ರಾಧಾ ಶಿವರಾಮ, ಸವಿತಾ ಕಿಶೋರ್ ಅನುμÁ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries