ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 50ಗ್ರಾಂ ಮಾರಕ ಎಂಡಿಎಂಎ ಮಾದಕ ವಸ್ತುವನ್ನು ಮೇಲ್ಪರಂಬ ಠಾಣೆ ಪೊಲೀಸರು ವಶಪಡಿಸಿಕೊಂಡು ಮೂರು ಮಂದಿಯನ್ನು ಬಂಧಿಸಿದ್ದಾರೆ. ಕಾಞಂಗಾಡು ಅಜನೂರ್ ಮೀನಪೀಸ್ ಕಡಪ್ಪುರ ನಿವಾಸಿ ಅಬ್ದುಲ್ ಹಕೀಂ, ಕುಂಬಳೆ ಕೊಪ್ಪಳ ನಿವಾಸಿ ಅಬ್ದುಲ್ ರಾಶಿದ್ ಹಾಗೂ ಉದುಮ ಪಾಕ್ಯಾರ ನಿವಾಸಿ ಅಬ್ದುಲ್ ರಹಮಾನ್ ಬಂಧಿತರು. ಮೊಗ್ರಾಲ್‍ಪುತ್ತೂರು ನಿವಾಸಿ ಮಹಮ್ಮದ್ ಅಶ್ರಫ್ ಪರಾರಿಯಾಗಿದ್ದಾನೆ.
ಪೊಯಿನಾಚಿಯಲ್ಲಿ ಮೇಲ್ಪರಂಭ ಠಾಣೆ ಇನ್ಸ್‍ಪೆಕ್ಟರ್ ಸಂತೋಷ್‍ಕುಮಾರ್ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆ ನಡೆಸುವ ಮಧ್ಯೆ ಆಗಮಿಸಿದ ಕಾರನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಈ ಮಧ್ಯೆ ಮಹಮ್ಮದ್ ಅಶ್ರಫ್ ಕಾರಿನಿಂದ ಪರಾರಿಯಾಗಿದ್ದು, ಉಳಿದವರನ್ನು ಸೆರೆಹಿಡಿಯಲಾಗಿತ್ತು. ಇವರು ಸಂಚಾರಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.






