ಕಾಸರಗೋಡು: ನಗರಸಭಾ ಕಾರ್ಯದರ್ಶಿಪಿ.ಎ ಜಸ್ಟಿನ್ ಅವರ ಸಹಿ ನಕಲು ಮಾಡಿ ಒಕ್ಯೂಪೆನ್ಸಿ ಸರ್ಟಿಫಿಕೇಟ್ ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿ ನಗರಸಭೆಯ ಮೂವರು ಸಿಬ್ಬಂದಿ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಗರಸಭಾ ಸೆಕ್ಷನ್ ಕ್ಲರ್ಕ್ ಪ್ರಮೋದ್ ಕುಮಾರ್, ರೆವೆನ್ಯೂ ಇನ್ಸ್‍ಪೆಕ್ಟರ್‍ಗಳಾದ ರಂಜಿತ್ ಹಾಗೂ ಎ.ಸಿ ಜಾರ್ಜ್ ಎಂಬವರಿಗೆ ಈ ಕೇಸು. ಇವರಲ್ಲಿ ಎ.ಸಿ ಜಾರ್ಜ್ ಅವರು ಆಲಪ್ಪುಳಕ್ಕೆ ವರ್ಗಾವಣೆಗೊಂಡಿದ್ದಾರೆ. ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ.
ಕಟ್ಟಡ ನಂಬ್ರ ಪಡೆಯುವ ನಿಟ್ಟಿನಲ್ಲಿ ತಳಂಗರೆ ನಿವಾಸಿಯೊಬ್ಬ ಸಲ್ಲಿಸಿದ್ದ ಅರ್ಜಿಯಲ್ಲಿ ತನ್ನ ನಕಲಿ ಸಹಿ ಹಾಕಿರುವುದನ್ನು ನಗರಸಭಾ ಕಾರ್ಯದರ್ಶಿ ಪತ್ತೆಹಚ್ಚಿ ಪ್ರಶ್ನಿಸಿದ್ದರು. ಅಲ್ಲದೆ ಇದನ್ನು ರದ್ದುಗೊಳಿಸಿದ್ದು, ಈ ಸಿಟ್ಟಿನಲ್ಲಿ ತಂಡವೊಂದು ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ಅವರ ಮೇಲೆ ತಂಡ ಹಲ್ಲೆಯನ್ನೂ ನಡೆಸಿತ್ತು. ನಕಲಿ ಸಹಿ ಹಾಕಿಸಲು ಮೂವರು ಸಿಬ್ಬಂದಿಯೂ ಶಾಮೀಲಾಗಿದ್ದರೆನ್ನಲಾಗಿದೆ.




