ಬದಿಯಡ್ಕ: ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆ ವೀಣಾವಾದಿನಿಯಲ್ಲಿ ಇಂದಿನಿಂದ(ಗುರುವಾರ) 8ರ ತನಕ ವೇದ ನಾದ ಯೋಗ ತರಂಗಿಣಿ ಕಾರ್ಯಕ್ರಮ ಹಾಗೂ ಸಂಗೀತ ಸಾಂಸ್ಕøತಿಕ ಭವನ ಬಾಲರಾಮವರಮ್ ಇದರ ಉದ್ಘಾಟನೆ ವಿವಿಧ ಕಾರ್ಯಕ್ರಮಗಳೊದಿಗೆ ನಡೆಯಲಿದೆ.
ಇಂದು ಬೆಳಗ್ಗೆ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ಇವರ ನೇತೃತ್ವದಲ್ಲಿ ಗಣಪತಿ ಹವನ, ಲಕ್ಷಾರ್ಚನೆ ನಡೆಯಲಿದೆ. ಬಳಿಕ ಸಾಂಸ್ಕøತಿಕ ಮೆರವಣಿಗೆ ನಡೆಯಲಿದ್ದು, ಬಳಿಕ ಕವಿಗೋಷ್ಠಿ ನಡೆಯಲಿದೆ. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಉದ್ಘಾಟಿಸುವರು. ಸಂಗೀತ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಮತ್ತಿತರರು ಉಪಸ್ಥಿತರಿರುವರು.
ಅಪರಾಹ್ನ ನಡೆಯುವ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನ ಪರಿಷತ್ತು ಅಧ್ಯಕ್ಷ ಬಸವರಾಜ್ ಎಸ್. ಹೊರಟ್ಟಿ ದೀಪ ಬೆಳಗಿಸಿ ಉದ್ಘಾಟಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಆಶ್ರಫ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಶಾಸಕ ಸಿ.ಎಚ್. ಸೆ ಕುಂಞಂಬು, ರವೀಶ ತಂತ್ರಿ ಕುಂಟಾರು, ಶಿವಶಂಕರ ನೆಕ್ರಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕುಂಬ್ಡಾಜೆ ಪಂ. ಅಧ್ಯಕ್ಷ ಹಮೀದಲಿ ಪೆÇಸಳಿಕೆ, ಆನಂದ ಮವ್ವಾರು, ಮಾಹಿನ್ ಕೇಳೋಟ್, ರವಿ ನಾಯ್ಕಾಪು, ಪ್ರವೀಣ್ ಕುಮಾರ್, ಚನಿಯಪ್ಪ ನಾಯ್ಕ, ನಾಗರಾಜ ಉಪ್ಪಂಗಳ ಉಪಸ್ಥಿತರಿರುವರು. ಯೋಗೀಶ್ ಶರ್ಮಾ ಬಳ್ಳಪದವು, ರಾಜರಾಮ ಪೆರ್ಲ, ವಿದ್ವಾನ್.ಪ್ರಭಾಕರ ಕುಂಜಾರು ಭಾಗವಹಿಸುವರು.
ಬಳಿಕ ಕಾರ್ಯಾಗಾರ, ಗಮಕ, ರಾತ್ರಿ ವಾಸ್ತು ರಾಕ್ಷೋಘ್ನ ಹೋಮ ನಡೆಯಲಿದೆ. 6ರಂದು ಬೆಳಿಗ್ಗೆ ಎಡನೀರು ಮಠಾದೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ನೇತೃತ್ವದಲ್ಲಿ ಪ್ರವೇಶ ಮುಹೂರ್ತ ನಡೆಯಲಿದೆ. ಬಳಿಕ ಭಾವಾಂಬಿಕಾ ಸಂಗೀತ ಕಾರ್ಯಕ್ರಮ, ಮಹಾ ಶ್ರೀಚಕ್ರ ನವಾವರಣ ಪೂಜೆ ನಡೆಯಲಿದೆ.
7ರಂದು ನವಗ್ರಹ ಪೂಜೆ, ರಾಶಿಕಪ್ರೀಯ, ಯಕ್ಷಗಾನ ತಾಳಮದ್ದಳೆ, ಮುರಳೀವರಮ್, ಗುರುಪೂಜೆ, ಹಿಂದೂಸ್ತಾನಿ ಸಂಗೀತ, ಭರತನಾಟ್ಯಂ ಕಾರ್ಯಕ್ರಮ ನಡೆಯಲಿದೆ.







