ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಷಷ್ಠೀ ಜಾತ್ರಾ ಮಹೋತ್ಸವ ಬುಧವಾರ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಆರಂಭಗೊಂಡಿತು.
ಇದರ ಅಂಗವಾಗಿ ಬೆಳಗ್ಗೆ ಉಷಃಪೂಜೆ, ಬಳಿಕ ಗಣಪತಿ ಪೂಜೆ, ಕಾರ್ತಿಕ ಲಕ್ಷ ದೀಪೋತ್ಸದಂದು ಸಂಪ್ರದಾಯಿಕವಾಗಿ ಉಬ್ಬೆ ಹಾಕಿದ ಬಾಳೆಗೊನೆಗಳನ್ನು ತೆಗೆಯುವ ಕ್ರಮದೊಂದಿಗೆ ಉಗ್ರಾಣ ತುಂಬಿಸುವುದು, ಮಧ್ಯಾಹ್ನ ಮಹಾಪೂಜೆ,ದೇವರ ಬಲಿ ಜರಗಿತು. ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಪಡ್ಡಂಬೈಲುಗುತ್ತು, ಮೊಕ್ತೇಸರರಾದ ಗಿರೀಶ್ ಕುಮಾರ್ ಕಾಟುಕುಕ್ಕೆ, ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರವಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ, ಕ್ಷೇತ್ರ ಅರ್ಚಕ ಮಧುಸೂದನ ಪುಣಿಂಚಿತ್ತಾಯ, ಉತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೋಡುಮಾಡು, ಮಾಜಿ ಮೊಕ್ತೇಸರರಾದ ವಿಷ್ಣು ಪ್ರಕಾಶ್ ಪಿಲಿಂಗಲ್ಲು, ನಾರಾಯಣ ಮಣಿಯಾಣಿ, ಮಿತ್ತೂರು ಪುರುμÉೂೀತ್ತಮ ಭಟ್, ರಘನಾಥ ರೈ ಕಟ್ಟತ್ತಾಡೆ ಮೊದಲಾದವರು ಭಾಗವಹಿಸಿದ್ದರು. ಜಾತ್ರಾಮಹೋತ್ಸವದಂಗವಾಗಿ ದಿನಂಪ್ರತಿ ವಿವಿಧ ಧಾರ್ಮಿಕ ಹಾಗೂ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿದೆ.
ಡಿ.7ರಂದು ಷಷ್ಠೀ ಮಹೋತ್ಸವ ಜರಗಲಿದೆ. ಇದರಂಗವಾಗಿ ಬೆಳಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ ಸಂತರ್ಪಣೆ, ಮಡೆಸ್ನಾನ, ಸಂಜೆ 4.30ರಿಂದ ಬೀದಿ ಮಡೆಸ್ನಾನ, ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀಭೂತಬಲಿ, ರಥೋತ್ಸವ, ಬೆಡಿ, ಉತ್ಸವ ನಡೆಯಲಿದೆ.






.jpg)

