ಮಂಜೇಶ್ವರ: ಪಾವೂರು ಮುಡಿಮಾರು ಶ್ರೀ ಮಲರಾಯ ಗುಳಿಗ ದೈವಸ್ಥಾನದ 12ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಡಿ. 26ರಂದು ಜರುಗಲಿದೆ.
ಕರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಕ್ಷೇತ್ರದಲ್ಲಿ ಜರುಗಿತು. ಕ್ಷೇತ್ರದ ಪ್ರಧಾನ ಅರ್ಚಕ ಚಂದ್ರಹಾಸ ಪೂಜಾರಿ ಅವರು ಪೆರ್ಮನಂಜಿ ಹರೀಶ್ ಗುರುಸ್ವಾಮಿಯವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಈ ಸಂದರ್ಭ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು, ಮಾಧವ ಪೂಜಾರಿ ಕುದುಕೋರಿ, ಐತಪ್ಪ ಪೂಜಾರಿ ಮಡಿಮಾರು, ನಾರಾಯಣ ಪೂಜಾರಿ ಮುಡಿಮಾರು, ಉಮೇಶಮುಡಿಮಾರು, ನವಿರಾಜ ಮುಡಿಮಾರು, ಚಂದ್ರಹಾಸ, ಪ್ರಕಾಶ್ ಕುಮಾರ್ ಮುಡಿಮಾರು, ರಾಕೇಶ್ ಅಂಚನ್, ನಾರಾಯಣ ಪೂಜಾರಿ ಪಲ್ಲ, ದೇವದಾಸ್ ಮುಡಿಮಾರು, ಮೋಹನ್ ಮುಡಿಮಾರು, ಯೋಗೀಶ್ ಉಪಸ್ಥಿತರಿದ್ದರು.
ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ದಿವ್ಯಹಸ್ತದಿಂದ ವಿವಿಧ ವೈದಿಕ ಕಾರ್ಯಕ್ರಮ ನಡೆಯುವುದು. 26ರಂದು ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ,ಶುದ್ಧ ಕಲಶ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ, ಮಧ್ಯಾಹ್ನ 2ಗಂಟೆಗೆ ಶ್ರೀ ಮಲರಾಯ ದೈವದ ನೇಮೋತ್ಸವ,ನಂತರ ಗುಳಿಗ ನೇಮೋತ್ಸವ, ರಾತ್ರಿ 8ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಮುಡಿಮಾರು ಇದರ ಪ್ರಯೋಜಕತ್ವದಲ್ಲಿ ಶಾರದಾ ಆಟ್ರ್ಸ್ ಕಲಾವಿದರು ಮಂಜೆಶ್ವರ ಇವರಿಂದ 'ಕಥೆ ಎಡ್ಡೆಂಡು' ಎಂಬ ಹಾಸ್ಯಮಯ ತುಳು ನಾಟಕ ಪ್ರದರ್ಶನ ಗೊಳ್ಳಲಿದೆ.




