ಕಾಸರಗೋಡು: ಕೋಳಿಕ್ಕಾಲ್ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ 2 ಲಕ್ಷ ರೂ ಮೊತ್ತದ ಡಿ.ಡಿ.ಯನ್ನು ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಘಟಕ ಅಧ್ಯಕ್ಷ ಅಖಿಲೇಶ್ ನಗುಮುಗಂ, ಜನಜಾಗೃತಿ ವೇದಿಕೆಯ ಕಾರಡ್ಕ ವಲಯ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ತಾಲೂಕು ಯೋಜನಾಧಿಕಾರಿ ಮುಖೇಶ್, ಕಾರಡ್ಕ ವಲಯ ಮೇಲ್ವಿಚಾರಕ ಸುರೇಶ್, ದಯಾನಂದ, ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿಕ್ಕಾಲು, ಕೇಶವ ಕೋಳಿಕ್ಕಾಲು, ಗಣೇಶ ವತ್ಸ, ರೋಹಿಣಿ ಚಂದ್ರನ್, ಸೇವಾ ಪ್ರತಿನಿಧಿ ಜಯಲಕ್ಷ್ಮಿ, ಕೃಷ್ಣ ಮಣಿಯಾಣಿ ಮೂಲೆ, ದೇವಾನಂದ ಶೆಣೈ, ಸುಧೀರ್ ಕುಮಾರ್ ರೈ, ಸೇವಾ ಸಮಿತಿಯ ಸದಸ್ಯರು, ಬ್ರಹ್ಮಕಲಶ ಸಮಿತಿ ಸದಸ್ಯರು ಊರ ಭಕ್ತರು ಉಪಸ್ಥಿತರಿದ್ದರು.






