ಕಾಸರಗೋಡು: ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರು ಕೇರಳದ ಅಭಿವೃದ್ಧಿ ಬಗ್ಗೆ ದೂರದರ್ಶಿತ್ವ ಹೊಂದಿದ್ದ ನೇತಾರರಾಗಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗೀತಾ ಕೃಷ್ಣನ್‍ತಿಳಿಸಿದ್ದಾರೆ.
ಅವರು ಉದುಮ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕೆ. ಕರುಣಾಕರನ್ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಯಲಿಲ್ ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಆರ್. ವಿದ್ಯಾಸಾಗರ್, ಪಿ.ವಿ. ಉದಯಕುಮಾರ್, ಶಿಬು ಕಡವಂಗಾನಂ, ಕೆ.ವಿ. ರಾಜಗೋಪಾಲನ್, ರಮೇಶ್ ಬೇಕಲ್, ಎಸ್.ವಿ. ರಾಮಕೃಷ್ಣನ್, ಸುನಿಲ್‍ಕುಮಾರ್ ಉದುಮ, ಕೋಟಾನ್ ಕುಞÂಪಂದಲ್, ರಜಾಕ್ ಮಂಗಾಟ್, ಕೊಪ್ಪಳ ಪ್ರಭಾಕರನ್, ಮುಹಮ್ಮದ್ ಕುಞÂ ಪಡಿಂಜಾರ್, ರತೀಶ್ ಞÉಕ್ಕಿಲಿ, ಕಾತ್ರ್ಯಾನಿ ಬಾಬು. ಉಪಸ್ಥಿತರಿದ್ದರು.





