ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ.ತೂಮಿನಾಡು ಇದರ ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ/ದಾನಿಗಳ ಸಹಕಾರದಿಂದ "ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ " ಸಮಾಜ ಕಾರ್ಯದ ಉದ್ದೇಶದಲ್ಲಿ ಸಂಕಷ್ಟದಲ್ಲಿರುವ ಆಶಕ್ತ ಕುಲಾಲ ಕುಟುಂಬಕ್ಕಾಗಿ " ಕುಲಾಲ ಆಸರೆಯ ದ್ವಿತೀಯ ಕುಲಾಲ ಸಹಾಯ ಹಸ್ತ ಯೋಜನೆ 15,000 ರೂ. ಮೊತ್ತವನ್ನು ಪುತ್ತಿಗೆ ಪಂಚಾಯತಿ ಕುಲಾಲ ಸಂಘ ಪುತ್ತಿಗೆ ಶಾಖೆಗೋಳಪಟ್ಟ ಮುಗು ಗ್ರಾಮದ ಬೀರಿಕುಂಜ ನಿವಾಸಿ ಗಂಟಲಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕುoಞಮೂಲ್ಯರ ಚಿಕಿತ್ಸೆಗಾಗಿ ಬುಧವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧೀರ್ ರಂಜನ್ ಕೆ ದೈಗೋಳಿ, ಪುತ್ತಿಗೆ ಪಂಚಾಯತಿ ಕುಲಾಲ ಶಾಖೆಯ ಹಿರಿಯ ಸದಸ್ಯ ಬಾಬು ಬಂಗೇರ ಕಟ್ಟತಡ್ಕ, ಅಮ್ಮು ಮಾಸ್ತರ್ ಪುತ್ತಿಗೆ, ಶಾಖೆಯ ಅಧ್ಯಕ್ಷ ಕೃಷ್ಣ ಪ್ರಸಾದ್, ಶಾಖೆಯ ಕಾರ್ಯದರ್ಶಿ ಸತೀಶ್ ಮಾಸ್ತರ್ ಜಾಲು ಉಪಸ್ಥಿತರಿದ್ದರು.




.jpg)
