ಕುಂಬಳೆ: ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು) ಜಿಲ್ಲಾ ಸಮ್ಮೇಳನ ಕುಂಬಳೆ ಶಿರಿಯಾ ಒಳಯಂ ಡಿ.ಎಂ.ಕಬಾನಾ ರೆಸಾರ್ಟ್ ನಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು. ಸಂಘಟನಾ ಸಮಿತಿ ಅಧ್ಯಕ್ಷ ಸುರೇಂದ್ರನ್ ಚಿಮೇನಿ ಧ್ವಜಾರೋಹಣಗೈದು ಚಾಲನೆ ನೀಡಿದರು.
ಸಮ್ಮೇಳನವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಕೆಜೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಸಿ ಸ್ಮಿಜನ್, ಐಜೆಯು ಕಾರ್ಯಕಾರಿ ಸದಸ್ಯ ಬಾಬು ಥಾಮಸ್, ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಬಿಜೆಪಿ ಕುಂಬಳೆ ಪಂಚಾಯತಿ ಅಧ್ಯಕ್ಷ ಸುಜಿತ್ ರೈ, ಕೆಜೆಯು ರಾಜ್ಯ ಪದಾಧಿಕಾರಿಗಳಾದ ಪ್ರಕಾಶನ್ ಪಯ್ಯನ್ನೂರು, ಪ್ರಮೋದ್ ಕುಮಾರ್, ಮಂಜೇಶ್ವರ ತಾಲೂಕು ಆಡಳಿತ ಭಾಷಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ಬಾಸ್ ಕೆ.ಎಂ.ವಾನಂದೆ ಭಾಗವಹಿಸಿದ್ದರು.ಈ ವೇಳೆ ಹಿರಿಯ ಪತ್ರಕರ್ತರಾದ ಹಸನ್ ಬದಿಯಡ್ಕ, ಅಶೋಕ ನೀರ್ಚಾಲ್, ಅಬ್ದುಲ್ ಖಾದರ್ ವಿಲ್ರೋಡಿ, ಅಬ್ಬಾಸ್ ವಾನಂದೆ, ಟಿ.ವಿ.ಚಂದ್ರದಾಸ್, ರಾಘವನ್ ಈಚ್ಚಾಟ್ಟಿಲ್, ಟಿ.ಪಿ.ರಾಘವನ್, ಇ.ಜಿ.ರವೀಂದ್ರನ್ ಅವರನ್ನು ಗೌರವ ಪೂರ್ವಕ ಸನ್ಮಾನಿಸಲಾಯಿತು. ಕೆಜೆಯು ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಕುಮಾರ್ ಜೊತೆ ಕಾರ್ಯದರ್ಶಿ ಪುರುಷೋತ್ತಮ ಭಟ್.ಕೆ., ಅಬ್ದುಲ್ಲ ಕುಂಬಳೆ, ರವೀಂದ್ರನ್ ಕೊಂಡೋಟಿ ಉಪಸ್ಥಿತರಿದ್ದರು. ಸುರೇಂದ್ರನ್ ಸ್ವಾಗತಿಸಿ, ಐ.ಮುಹಮ್ಮದ್ ರಫೀಕ್ ವಂದಿಸಿದರು. ಬಳಿಕ ಪ್ರತಿನಿಧಿ ಸಮ್ಮೇಳನ ನಡೆಯಿತು.




.jpg)
