ಕಾಸರಗೋಡು: ಐಸಿಎಆರ್-ಸಿಪಿಸಿಆರ್‍ಐ 109 ನೇ ಸಂಸ್ಥಾಪನಾ ದಿನಾಚರಣೆ ಜ. 5ರಂದು ಕಾಸರಗೋಡಿನ ಐಸಿಎಆರ್-ಸಿಪಿಸಿಆರ್‍ಐ ಕ್ಯಾಂಪಸ್‍ನಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಜ. 3ರಿಂದ 5ರ ವರೆಗೆ 'ಸುಸ್ಥಿರ ಅಭಿವೃದ್ಧಿ ಗುರಿಗಾಗಿ ತೋಟಗರಿಕಾ ವಲಯವನ್ನು ಬಳಸಿಕೊಳ್ಳುವುದರ' ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕೃಷಿ ಉತ್ಪನ್ನ ಪ್ರದರ್ಶನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಜ. 3ರಂದು ಬೆಳಗ್ಗೆ 10ಕ್ಕೆ ಐಸಿಎಆರ್ ಮಹಾನಿರ್ದೇಶಕ ಮತ್ತು ಡಿಎಆರ್‍ಇ ಕಾರ್ಯದರ್ಶಿ ಡಾ ಹಿಮಾಂಶು ಪಾಠಕ್ ಸಮಾರಂಭ ಉದ್ಘಾಟಿಸುವರು. ಸಭೆಯಲ್ಲಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಕೃಷಿ ಉದ್ಯಮಿಗಳು, ವಿವಿಧ ರಾಜ್ಯಗಳ ಅಭಿವೃದ್ಧಿ ಏಜೆನ್ಸಿಗಳ ಅಧಿಕಾರಿಗಳು, ಎಫ್‍ಪಿಒಗಳು, ರೈತರು ಮತ್ತು ಇತರ ಮಧ್ಯವರ್ತಿಗಳು ಪಾಲ್ಗೊಳ್ಳುವರು.
ಸೆಮಿನಾರ್‍ನಲ್ಲಿ ಕೃಷಿಯಲ್ಲಿನ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳಿಂದ ಮಾತುಕತೆಗಳು, ಪ್ಯಾನಲ್ ಚರ್ಚೆ, ಇಂಟರ್‍ಫೇಸ್, ಮೌಖಿಕ ಮತ್ತು ಪೆÇೀಸ್ಟರ್ ಪ್ರಸ್ತುತಿಗಳು, ಪ್ರದರ್ಶನಗಳು, ಕ್ಷೇತ್ರ ಸಂದರ್ಶನ ಮತ್ತು ಯುವ ಸಂಶೋಧಕ ಪ್ರಶಸ್ತಿ ವಿತರಣೆ ಒಳಗೊಂಡಿದೆ.
ವಿಶ್ವಸಂಸ್ಥೆಯು 2015 ರಲ್ಲಿ ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿಯ ಗುರಿ(ಎಸ್‍ಡಿಜಿ) ಪೂರೈಸುವಲ್ಲಿ ತೋಟಗಾರಿಕಾ ವಲಯದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲು ಮತ್ತು ನ್ಯೂನತೆಗಳನ್ನು ಕಂಡುಕೊಂಡು ಮುಂದಿನ ಐದು ವರ್ಷಗಳವರೆಗೆ ಕಾರ್ಯತಂತ್ರಗಳನ್ನು ರೂಪಿಸಲು ಸೆಮಿನಾರ್ ಆಯೋಜಿಸಲಾಗಿದೆ.
ಜ.3ರಿಂದ 5ರ ವರೆಗೆ ವಿವಿಧ ಐಸಿಎಆರ್ ಸಂಸ್ಥೆಗಳು, ಕೆವಿಕೆಗಳು, ಅಭಿವೃದ್ಧಿ ಏಜೆನ್ಸಿಗಳು, ಯಶಸ್ವಿ ಉದ್ಯಮಿಗಳ ಉತ್ಪನ್ನಗಳು, ಸ್ವ-ಸಹಾಯ ಗುಂಪುಗಳಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಭವ್ಯ ಪ್ರದರ್ಶನ ಸಾರ್ವಜನಿಕರಿಗಾಘ ನಡೆಯಲಿದೆ. ಇವುಗಳಲ್ಲಿ ಗೇರು ಕೃಷಿಯಲ್ಲಿ ತಂತ್ರಜ್ಞಾನ(ಡಿಸಿಆರ್ ಪುತ್ತೂರು), ಮಸಾಲೆಗಳು (ಐಐಎಸ್‍ಆರ್ ಕೋಯಿಕ್ಕೋಡ್), ಗಡ್ಡೆ ಬೆಳೆಗಳು ( ಸಿಟಿಸಿಆರ್‍ಐ ತಿರುವನಂತಪುರ), ತಾಳೆ ಎಣ್ಣೆ (ಐಐಎಚಾರ್ ಬೆಂಗಳೂರು), ಮೀನುಗಾರಿಕೆ(ಸಿಎಂಎಫ್‍ಆರ್‍ಐ-ಸಿಐಎಫ್‍ಟಿ ಕೊಚ್ಚಿ), ರಬ್ಬರ್(ಆರ್‍ಆರ್‍ಐಐ ಕೋಟ್ಟಾಯಂ), ಪೆಡವೇಗಿ), ಎಣ್ಣೆ ಬೀಜಗಳು (ಐಐಓಆರ್ ಹೈದರಾಬಾದ್), ಹಣ್ಣುಗಳು ಮತ್ತು ತರಕಾರಿ (ಐಐಎಚ್‍ಆರ್ ಬೆಂಗಳೂರು)ಮತ್ತು ಕಾಫಿ (ಸಿಸಿಆರ್‍ಐ ಬಾಳೆಹೊನ್ನೂರು) ಸ್ಥಳೀಯರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳ ಜೊತೆಗೆ ಆಹಾರ ಪದಾರ್ಥಗಳು, ಬೀಜಗಳು, ನರ್ಸರಿ ಸಸಿಗಳು, ಜೈವಿಕ ಗೊಬ್ಬರಗಳು, ನೀರಾವರಿ ಮತ್ತು ಕೃಷಿ ಉಪಕರಣಗಳು, ಕರಕುಶಲ ವಸ್ತುಗಳು, ಕೃಷಿ ಹಣಕಾಸು ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರದರ್ಶನ ಸ್ಥಳದಲ್ಲಿ ತೆಂಗು ಯಾ ಅಡಿಕೆ ಕೃಷಿ ನಡೆಸುವ ವಿಧಾನ, ಮೌಲ್ಯವರ್ಧಿತ ಉತ್ಪನ್ನ ಮತ್ತು ಚಾಕೊಲೇಟ್ ತಯಾರಿಕೆಯ ಬಗ್ಗೆ ತರಬೇತಿಯನ್ನು ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಆಯೋಜಿಸಲಾಗಿದೆ.






