ಕಾಸರಗೋಡು : 23ನೇ ಪಕ್ಷದ ಮಹಾಧಿವೇಶನದ ಅಂಗವಾಗಿ 2025ರ ಫೆ.5ರಿಂದ 7ರವರೆಗೆ ಕಾಞಂಗಾಡಿನಲ್ಲಿ ನಡೆಯಲಿರುವ ಸಿಪಿಎಂ ಕಾಸರಗೋಡು ಜಿಲ್ಲಾ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆಯುತ್ತಿರುವುದಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆಬ್ರವರಿ 7 ರಂದು ಕಾಞಂಗಾಡ್‍ನಲ್ಲಿ ರ್ಯಾಲಿ, ರೆಡ್ ಆರ್ಮಿ ಮೆರವಣಿಗೆ ಮತ್ತು ಸಾವಿರರು ಮಂದಿ ಭಾಗವಹಿಸುವ ಬಹಿರಂಗ ಸಭೆಯನ್ನು ಆಯೋಜಿಸಲಾಗುವುದು. ಜಿಲ್ಲಾ ಪ್ರತಿನಿಧಿ ಸಭೆಯನ್ನು ಪಕ್ಷದ ಪೋಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್ ಉದ್ಘಾಟಿಸುವರು. ಕೇಂದ್ರ ಸಮಿತಿ ಸದಸ್ಯರಾದ ಇ.ಪಿ.ಜಯರಾಜನ್, ಪಿ.ಕೆ.ಶ್ರೀಮತಿ, ರಾಜ್ಯ ಕಾರ್ಯದರ್ಶಿಗಳಾದ ಪಿ.ಪಿ.ರಾಮಕೃಷ್ಣನ್, ಅಲವೂರು ನಾಗಪ್ಪನ್, ಪಿ.ಕೆ.ಬಿಜು ಮೊದಲಾದವರು ಭಾಗವಹಿಸುವರು.
ಜಿಲ್ಲೆಯಲ್ಲಿ 1959 ಶಾಖಾ ಸಮ್ಮೇಳನಗಳು, 143 ಸ್ಥಳೀಯ ಸಮ್ಮೇಳನಗಳು ಮತ್ತು 12 ಕ್ಷೇತ್ರ ಸಮ್ಮೇಳನಗಳನ್ನು ಆಯೋಜಿಸಲಾಗುವುದು. ಜಿಲ್ಲಾ ಸಮಾವೇಶಕ್ಕೆ ಪೂರ್ವಭಾವಿಯಾಗಿ ಜ.13ರಂದು ಜಿಲ್ಲೆಯ ಎಲ್ಲ ಪಕ್ಷದ ಕಚೇರಿಗಳು ಹಾಗೂ ಪಕ್ಷದ ಹಾಗೂ ಬೆಂಬಲಿಗರ ಮನೆಗಳಲ್ಲಿ ಧ್ವಜಾರೋಹಣ ನಡೆಯಲಿದೆ.
ಆಕರ್ಷಕ ಪ್ರಚಾರ ಗುಡಿಸಲುಗಳು ಮತ್ತು ಶಿಲ್ಪಗಳನ್ನು ಪಕ್ಷದ ಶಾಖೆಗಳ ನೇತೃತ್ವದಲ್ಲಿ ನಿರ್ಮಿಸಲಾಗುವುದು. ಕ್ಷೇತ್ರ ಮಟ್ಟದಲ್ಲಿ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಆಧಾರದ ಮೇಲೆ ಅಭಿಯಾನವನ್ನು ಆಯೋಜಿಸಲಾಗಿದೆ.
ಸಮ್ಮೇಳನ ನಡೆಯುವ ಕಾಞಂಗಾಡು ನಗರಕ್ಕೆ ಸೀತಾರಾಂ ಯಚೂರಿ ಮತ್ತು ಕೊಡಿಯೇರಿ ಬಾಲಕೃಷ್ಣನ್ ನಗರ ಎಣಬುದಗಿ ಹೆಸರನ್ನಿರಿಸಲಾಗುವುದು. ಕಾಞಂಗಾಡಿನಲ್ಲಿ ಪ್ರತಿನಿಧಿ ಸಮ್ಮೇಳನ ನಗರದಲ್ಲಿ ಧ್ವಜಾರೋಹಣ ನಡೆಸಲಿರುವ ಧ್ವಜವನ್ನು ಪೈವಳಿಕೆ ರಕ್ತಸಾಕ್ಷಿ ಸ್ಮೃತಿ ಮಂಟಪದಿಂದ ಧ್ವಜಮರವನ್ನು ಕಯ್ಯೂರು ರಕ್ತಸಾಕ್ಷಿ ಮಂಟಪದಿಂದ ಮೆರವಣಿಗೆ ಮೂಲಕ ತರಲಾಗುವುದು.
ಸಮ್ಮೇಳನದ ಅಂಗವಾಗಿ ಜ.25 ಮತ್ತು 26ರಂದು ಇಡೀ ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಚಟುವಟಿಕೆ ನಡೆಸಲಾಗುವುದು. ಇದರ ಅಂಗವಾಗಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಎಂ.ವಿ.ಬಾಲಕೃಷ್ಣನ್ ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಜಯಾನಂದ ಉಪಸ್ಥಿತರಿದ್ದರು.





