ಕೇರಳ ಪೋಲೀಸರು ಶೇರ್ ಮಾಡಿರುವ ಫೇಸ್ ಬುಕ್ ಪೋಸ್ಟ್ ಅನ್ನು ಮುರಳಿ ತುಮ್ಮರುಕುಡಿ ಎಂಬವರು ಭಾರೀ ಟೀಕಿಸಿದ್ದಾರೆ. ಪೋಲಿಸರಿಗೆ ‘ಸಾಮೂಹಿಕ’ ಕಿರುಕುಳ ನೀಡುವ ಪೋಸ್ಟ್‍ನಲ್ಲಿನ ಅಪಾಯವನ್ನು ಮುರಳಿ ತುಮ್ಮರುಕುಡಿ ಎತ್ತಿ ತೋರಿಸಿದ್ದಾರೆ.
ಕೇರಳ ಪೋಲೀಸರ ಫೇಸ್‍ಬುಕ್ ಪೋಸ್ಟ್‍ನಲ್ಲಿ ಪೋಲೀಸ್ ಅಧಿಕಾರಿಯೊಬ್ಬರು ಕಾಡಾನೆ ರಸ್ತೆ ದಾಟದಂತೆ ಕಸರತ್ತು ಪ್ರದರ್ಶಿಸಿದ್ದು 'ಧೈರ್ಯ' ಚಿತ್ರದ ದೃಶ್ಯದಂತಿತ್ತು. ನಮ್ಮ ಪೋಲೀಸರಿಗೆ ಹಿಂದಕ್ಕೋಡುವ, ಕಾಲ್ಕೀಳುವ ಅಭ್ಯಾಸವಿಲ್ಲ, ಎದೆಯೊಡ್ಡಿ ನಿಂತಿದ್ದಾರೆ ಎಂಬ ಶೀರ್ಷಿಕೆಯನ್ನೂ ಕೊಟ್ಟಿರುವ ಪೋಲೀಸ್ ಪೋಟ್ಸ್ ಗೆ ಮುರಳಿ ತುಮ್ಮರುಕುಡಿ ಟೀಕಿಸಿದರು.
ವಿಪತ್ತು ಎದುರಾದಾಗ ಸ್ವಂತ ಪ್ರಾಣವನ್ನೇ ಪಣಕ್ಕಿಡುವುದು ವೃತ್ತಿಪರ ಮಾರ್ಗವಲ್ಲ ಎಂದು ತಿಳಿಸಿದರು. ಸರಿಯಾದ ಸುರಕ್ಷತಾ ಸಾಧನಗಳ ಸಹಾಯದಿಂದ ಮಾರ್ಗಸೂಚಿಗಳ ಪ್ರಕಾರ ಮಾಡಬೇಕಾದ ಒಂದು ನಿರ್ವಹಣಾ ಕಾರ್ಯಾಚರಣೆಯಾಗಿದೆ. ಈ ನಿಟ್ಟಿನಲ್ಲಿ ‘ಕೌಶಲ್ಯವೇ ಮುಖ್ಯವೇ ಹೊರತು ಧೈರ್ಯವಲ್ಲ’ ಎಂದೂ ತುಮ್ಮರುಕುಡಿ ನೆನಪಿಸಿದ್ದಾರೆ.
ಕೇರಳ ಪೋಲೀಸರ ಕ್ರಮವು ರಕ್ಷಣಾ ಕಾರ್ಯಾಚರಣೆಯ ವಿಷಯದಲ್ಲಿ ಪೋಲೀಸರ ವೃತ್ತಿಪರತೆಯ ಕೊರತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಎರಡು ವರ್ಷಗಳ ಹಿಂದೆ ಅರಣ್ಯಾಧಿಕಾರಿಯೊಬ್ಬರು ಕಾಡಾನೆಗೆ ಎದುರಾಗಿ ಇಂತಹದೇ ಕಸರತ್ತು ಪ್ರದರ್ಶಿಸಿದ್ದ ಸುದ್ದಿ ವೈರಲ್ ಆಗಿದ್ದು, ಇಂದು ಆ ಅಧಿಕಾರಿ ಬದುಕಿಲ್ಲ ಎಂದರು. ಕಾಡುಪ್ರಾಣಿಗಳೊಂದಿಗೆ ವ್ಯವಹರಿಸುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಎಚ್ಚರಿಕೆಯೊಂದಿಗೆ ಮುರಳಿ ತುಮ್ಮರುಕುಡಿ ತಮ್ಮ ಅಭಿಪ್ರಾಯಗಳನ್ನು ಕೊನೆಗೊಳಿಸಿದ್ದಾರೆ.
ಜನರಿಗೆ ತಪ್ಪು ಪ್ರೇರಣೆ ನೀಡುವ ಕೇರಳ ಪೋಲೀಸರ ಪೋಸ್ಟ್ ವಿರುದ್ಧ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಪೋಲೀಸರ ವಿವಾದಾತ್ಮಕ ಪೋಸ್ಟ್ ಮತ್ತು ತುಮ್ಮರುಕುಡಿ ಅವರ ವಿಮರ್ಶಾತ್ಮಕ ಪೋಸ್ಟ್ ಗಮನಿಸಬಹುದು.





