ತಿರುವನಂತಪುರಂ: ಕ್ರಿಸ್‍ಮಸ್ ಆಚರಣೆ ಹಿನ್ನೆಲೆಯಲ್ಲಿ ಕೇರಳ ಬಿವರೇಜ್ ಕಾರ್ಪೋರೇಶನ್ ಮಳಿಗೆಗಳ ಮೂಲಕ 152 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಬೆವರೇಜಸ್ ಕಾರ್ಪೋರೇಶನ್ ಕ್ರಿಸ್‍ಮಸ್ ಮತ್ತು ಡಿ.24 ರ ದಿನಾಂಕಗಳ ಮದ್ಯ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಡಿಸೆಂಬರ್ 24 ಮತ್ತು 25 ರಂದು ಒಟ್ಟು 152.06 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಆದರೆ ಕಳೆದ ವರ್ಷ ಎರಡು ದಿನದಲ್ಲಿ 122.14 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.24.50ರಷ್ಟು ಹೆಚ್ಚಳವಾಗಿದೆ.
ಮದ್ಯದ ಬೆಲೆಯಲ್ಲಿನ ಏರಿಕೆ ಆದಾಯದಲ್ಲೂ ಪ್ರತಿಫಲಿಸಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ 29.92 ಕೋಟಿ ಹೆಚ್ಚು ಮದ್ಯ ಮಾರಾಟವಾಗಿದೆ. ಕ್ರಿಸ್ಮಸ್ ದಿನದಂದೇ 54.64 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಇದು 51.14 ಕೋಟಿ ಆಗಿತ್ತು. ಈ ಬಾರಿ ಸುಮಾರು ಶೇ.6.84ರಷ್ಟು ಏರಿಕೆಯಾಗಿದೆ.
ಕ್ರಿಸ್‍ಮಸ್ ಹಬ್ಬದಂದು ಮದ್ಯ ಮಾರಾಟ ಜೋರಾಗಿತ್ತು. ಡಿಸೆಂಬರ್ 24 ರಂದು 1.40 ಕೋಟಿ ರೂ., ಮಳಿಗೆಗಳ ಮೂಲಕ 26.02 ಕೋಟಿ ಮದ್ಯ ಮಾರಾಟವಾಗಿದೆ. ಒಟ್ಟು 97.42 ಕೋಟಿ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.37.21ರಷ್ಟು ಹೆಚ್ಚಳವಾಗಿದೆ.





