ಉಪ್ಪಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಸಂಸ್ಥೆಯ ಉಪ್ಪಳ ಘಟಕದ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಅವರನ್ನು ಸರ್ವಾನುಮತದಿಂದ ಆರಿಸಲಾಗಿದೆ.
ಇತ್ತೀಚೆಗೆ ಶ್ರೀಹರಿ ಭಜನಾ ಸಂಘ ಕುಳೂರು ಸಂಘದ ವಠಾರದಲ್ಲಿ ಉಪ್ಪಳ ಘಟಕದ ಸರ್ವ ಸದಸ್ಯರ ಸಭೆ ಜರಗಿತ್ತು. ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಪೆÇಯ್ಯೆಲು ಕುಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಗೌರವ ಮಾರ್ಗದರ್ಶಕರಾಗಿರುವ ಸಮಿತಿಯಲ್ಲಿ ಮುಂದಿನ ಸಾಲಿಗೆ ಉಪ್ಪಳ ಘಟಕದ ಗೌರವಾಧ್ಯಕ್ಷರಾಗಿ ಪಿ ಆರ್ ಶೆಟ್ಟಿ ಪೊಯ್ಯೆಲು ಕುಳೂರು, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಶೆಟ್ಟಿ ಕಳಾಯಿ, ಸಂಚಾಲಕರಾಗಿ ಯೋಗೀಶ ರಾವ್ ಚಿಗುರುಪಾದೆ, ಕೋಶಾಧಿಕಾರಿಯಾಗಿ ಶಶಿಧರ ಪೂಂಜ ಕೊಂಡೆವೂರು ಹಾಗೂ ಇತರ ಪದಾಧಿಕಾರಿಗಳನ್ನು ಆರಿಸಲಾಯಿತು.

-Chandrahasa%20SHETTY.jpg)

