ಬದಿಯಡ್ಕ: ವಿದ್ಯುತ್ ದರ ಏರಿಕೆಯ ವಿರುದ್ಧ ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ವತಿಯಿಂದ ಬುಧವಾರ ಸಂಜೆ ಬದಿಯಡ್ಕದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಬಿಜೆಪಿ ಮುಖಂಡ ಮೈರ್ಕಳ ನಾರಾಯಣ ಭಟ್ ಮಾತನಾಡಿ, ವಿದ್ಯುತ್ ದರವನ್ನು ಏರಿಸುವ ಮೂಲಕ ರಾಜ್ಯ ಸರ್ಕಾರ ಜನತೆಯ ಜೇಬಿಗೆ ಕತ್ತರಿ ಹಾಕುವ ಕಾರ್ಯವನ್ನು ಮಾಡುತ್ತಿದೆ. ಪಿಣರಾಯಿ ನೇತೃತ್ವದ ಎಡರಂಗ ಸರ್ಕಾರದ ವಂಚನೆಯ ಆಡಳಿತ ಕೊನೆಗಾಣಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ, ಶರತ್ ವಳಮಲೆ, ರವಿ ಬಿಎಂಎಸ್, ವಕೀಲ ಗಣೇಶ್, ಈಶ್ವರ ಮಾಸ್ತರ್ ಪೆರಡಾಲ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


