ಮುಜಾಫರ್‌ನಗರ : ಇಲ್ಲಿನ ಬುಧಾನಾ ಪಟ್ಟಣದಲ್ಲಿ ಭೂಮಾಲೀಕರ ಗುಂಪೊಂದು ಹಳೆಯ ಮಝಾರ್ (ದರ್ಗಾ) ಅನ್ನು ನೆಲಸಮಗೊಳಿಸಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಛೋಟಾ ಬಜಾರ್ ನಿವಾಸಿ ಗುಲ್ಜಾರ್ ಉದ್ದೀನ್, ಆತನ ಸಹೋದರರಾದ ಅಘನ್, ಅಮೀರ್ ಜಿಯಾ ಹಾಗೂ ಇತರ 10ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
ಬುಧಾನಾ-ಕಂಡ್ಲಾ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯ ಬಳಿ ಇರುವ ಮಝಾರ್ ಅನ್ನು ಕೆಡವಲಾಗಿದೆ ಎಂದು ಬುಧಾನಾ ನಿವಾಸಿ ಪವನೇಶ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಭೂಮಾಲೀಕರ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





