ಕೋಲ್ಕತ್ತ: ಪಶ್ಚಿಮ ಬಂಗಾಳ ಸರ್ಕಾರ ಕಲಾವಿದರು ಮತ್ತು ಲೇಖಕರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಆರೋಪಿಸಿದ್ದಾರೆ.
,ತಸ್ಲೀಮಾ ಅವರ ಕಾದಂಬರಿ ಆಧಾರಿತ 'ಲಜ್ಜಾ' ನಾಟಕವನ್ನು ಎರಡು ನಾಟಕೋತ್ಸವಗಳಲ್ಲಿ ರದ್ದುಪಡಿಸಿದ ನಂತರ ಅವರು ಈ ಆರೋಪ ಮಾಡಿದ್ದಾರೆ.
ಉತ್ತರ ಪರಗಣ ಹಾಗೂ ಹೂಗ್ಲಿಯ ಎರಡು ನಾಟಕೋತ್ಸವಗಳಲ್ಲಿ 'ಲಜ್ಜಾ' ನಾಟಕ ಪ್ರದರ್ಶನಕ್ಕೆ ಎರಡು ತಿಂಗಳ ಹಿಂದೆ ಅನುಮತಿ ನೀಡಲಾಗಿತ್ತು. ಆದರೆ ಏಕಾಏಕಿ ನಾಟಕವನ್ನು ರದ್ದು ಮಾಡಲಾಗಿದೆ ಎಂದು ತಸ್ಲೀಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಾಟಕ ಎರಡು ಸಮುದಾಯಗಳ ನಡುವೆ ಗಲಭೆ ಸೃಷ್ಟಿಸಬಹುದು ಎಂಬ ಕಾರಣದಿಂದ ಪೊಲೀಸರು ಆಯೋಜಕರ ಮೇಲೆ ಒತ್ತಡ ಹೇರಿ ಲಜ್ಜಾ ನಾಟಕ ಪ್ರದರ್ಶನವನ್ನು ರದ್ದುಪಡಿಸಿದ್ದಾರೆ ಎಂದು ತಸ್ಲೀಮಾ ಆರೋಪಿಸಿದ್ದಾರೆ
ಇತ್ತ ಬಿಜೆಪಿ ನಾಯಕರು ತಸ್ಲೀಮಾ ಅವರನ್ನು ಬೆಂಬಲಿಸಿದ್ದು ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಅವರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.





