ಕಾಸರಗೋಡು: ಕಾಸರಗೋಡು ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆ ವಿದ್ಯಾನಗರ ಇದರ 28ನೇ ವಾರ್ಷಿಕೋತ್ಸವವು ಜ.19 ಭಾನುವಾರ ಕಾಸರಗೋಡು ಬೀರಂತಬೈಲಿನಲ್ಲಿರುವ ಲಲಿತ ಕಲಾಸದನದಲ್ಲಿ ಜರಗಲಿದೆ. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು ಶ್ರೀ ಎಡನೀರು ಮಠ ಇವರ ದಿವ್ಯ ಅನುಗ್ರಹದೊಂದಿಗೆ ಬೆಳಗ್ಗೆ 9.30ಕ್ಕೆ ದೀಪಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 10 ರಿಂದ ಸಂಗೀತ ಶಾಲೆಯ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್ ಹಾಗೂ ಶಿಷ್ಯಂದಿರಿಂದ ಸಂಗೀತೋಪಾಸನೆ ನಡೆಯಲಿದೆ. ಪಕ್ಕವಾದ್ಯದಲ್ಲಿ ವಯಲಿನ್‍ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಾಲರಾಜ್ ಬೆದ್ರಡಿ, ಡಾ. ಮಾಯಾ ಮಲ್ಯ, ಮೃದಂಗದಲ್ಲಿ ವಿದ್ವಾನ್ ಕೋವೈ ಕಣ್ಣನ್ ಕಾಞಂಗಾಡು, ವಿದ್ವಾನ್ ರಾಜೀವ್ ಗೋಪಾಲ್ ವೆಳ್ಳಿಕ್ಕೋತ್, ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಟಿ.ಕೆ. ವಾಸುದೇವ ಕಾಞಂಗಾಡು ಜೊತೆಗೂಡಲಿದ್ದಾರೆ.
`ವರಾಹರೂಪಂ' ಖ್ಯಾತಿಯ ಸಾಯಿ ವಿಘ್ನೇಶ್ :
ಕಾಂತಾರ ಸಿನಿಮಾದ ವರಾಹರೂಪಂ ಹಾಡಿನ ಮೂಲಕ ಸಿನಿಮಾ ಸಂಗೀತಲೋಕದಲ್ಲಿ ಜನಪ್ರಿಯರಾದ ವಿದ್ವಾನ್ ಸಾಯಿ ವಿಘ್ನೇಶ್ ಅವರಿಂದ ಸಂಜೆ 4 ಕ್ಕೆ ಪ್ರಧಾನ ಕಚೇರಿ ನಡೆಯಲಿದೆ. ವಯಲಿನ್‍ನಲ್ಲಿ ವಿದ್ವಾನ್ ಕರೈಕಲ್ ವೆಂಕಟಸುಬ್ರಹ್ಮಣ್ಯನ್, ಮೃದಂಗದಲ್ಲಿ ವಿದ್ವಾನ್ ಎಂ.ಎಸ್.ವೆಂಕಟಸುಬ್ರಹ್ಮಣ್ಯನ್ ಹಾಗೂ ಘಟಂನಲ್ಲಿ ವಿದ್ವಾನ್ ರಿಜು ಉಣ್ಣಿಕೃಷ್ಣನ್ ಪಾಲಕ್ಕಾಡ್ ಸಹಕರಿಸಲಿದ್ದಾರೆ. ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಗೀತ ಶಾಲೆಯ ಸಂಚಾಲಕ ವಿದ್ವಾನ್ ಬಿ.ಜಿ.ಈಶ್ವರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




-%20Sai%20Vignesh.jpg)
