ಬದಿಯಡ್ಕ: ಬೇರ್ಕಡವು ಸೀತಾರಾಮ ಭಟ್ಟರ ಮೊಮ್ಮಗ ಶಿವರಂಜನ್ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅತ್ಯುತ್ತಮ ವಿದ್ಯಾರ್ಥಿಗೆ ಕೊಡಮಾಡುವ ಚಿನ್ನದ ಪದಕ `ಸ್ವರ್ಣಾಂಕುರ'ವನ್ನು ಶಾಲಾ ವಸಂತೋತ್ಸವದಲ್ಲಿ ಪ್ರದಾನ ಮಾಡಲಾಯಿತು.
2023-24ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಬಹುಮುಖ ಪ್ರತಿಭೆ ಸ್ಮøತಿ ಭಟ್ ತನ್ನದಾಗಿಸಿಕೊಂಡಳು. ಭರತನಾಟ್ಯ, ಆಟೋಟ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶಾಲೆಯನ್ನು ಪ್ರತಿನಿಧೀಕರಿಸಿ ಭಾಗವಹಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾಳೆ. ಉತ್ತಮ ನಡೆನುಡಿಯ ಮೂಲಕ ಆತ್ಮಧೈರ್ಯದೊಂದಿಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿರುವ ಈಕೆ ಎಲ್ಲರಿಗೂ ಮಾದರಿ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾಳೆ. ಕೃಷಿಕ ಹಾಗೂ ಕೃಷಿ ಯಂತ್ರೋಪಕರಣಗಳ ಉಪಯೋಗಗಳಲ್ಲಿ ಪರಿಣಿತಿಯನ್ನು ಪಡೆದ ಕೊರೆಕ್ಕಾನ ಕೃಷ್ಣಾನಂದ ಮತ್ತು ಸವಿತಾ ದಂಪತಿಗಳ ಪುತ್ರಿ ಈಕೆ.




