ಕಾಸರಗೋಡು ಕೂಡ್ಲು ರಾಮದಾಸ್ ನಗರ ಸ್ವದೇಶಿಗಳಾದ ಫೆÇೀಟೋಗ್ರಾಫರ್, ಟೂರ್ ಮೇನೇಜರ್ ಸನತ್ ಕುಮಾರ್ ನಾಯ್ಕ್ ಮತ್ತು ಸಂಪತ್ ಕುಮಾರ್ ಶೆಟ್ಟಿ ಕಾಸರಗೋಡಿನಿಂದ ಮೇ 26ರಂದು ಬದರಿನಾಥಕ್ಕೆ ರೈಲುಯಾತ್ರೆ ಹೊರಟು ಅಲ್ಲಿಂದ ಜೂನ್ 3 ರಂದು ಶಬರಿಮಲೆಗೆ ಇರುಮುಡಿ ಕಟ್ಟಿ ಅಯೋಧ್ಯೆ, ಉಜೈನಿ, ದ್ವಾರಕ, ಪುರಿಜಗನ್ನಾಥ್, ರಾಮೇಶ್ವರ, ಅಚ್ಚನ್ ಕೋವಿಲ್ 11 ರಾಜ್ಯಗಳ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿ ದಿನಕ್ಕೆ 40 ಕಿ.ಮೀ ನಂತೆ ಒಟ್ಟು 8000 ಕಿ.ಮೀ. 223 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಎರುಮೇಲಿ ತಲುಪಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪನ ದರ್ಶನ ಪಡೆದರು.
ಇವರು ದೀರ್ಘಕಾಲದ ಕಠಿಣಯಾತ್ರೆ ಮುಗಿಸಿ ಕಾಸರಗೋಡು ರೈಲ್ವೆ ನಿಲ್ದಾಣ ತಲುಪಿದಾಗ ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ಸಮಿತಿ ವತಿಯಿಂದ ಸ್ವಾಗತವನ್ನು ನೀಡಲಾಯಿತು. ಬಳಿಕ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ಸಮಿತಿ ಗೌರವಾಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಶ್ರೀ ಕರುಣಾಕರ ಗುರುಸ್ವಾಮಿ ಫಲಪುಷ್ಪವನ್ನಿತ್ತು ಕಾರ್ಳೆ ಗುತ್ಯಮ್ಮ ಭಗವತೀ ದೈವಸ್ಥಾನದ ಕಾರ್ಯದರ್ಶಿಗಳಾದ ಉಮೇಶ್ ಕಡಪ್ಪುರ ಹಾಗೂ ವಿ.ಎಚ್.ಪಿ. ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯ್ಕ್ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಪ್ರಮೊದ್ ಎಸ್.ವಿ.ಟಿ. ನಾಮದೇವ, ವಿಘ್ನೇಶ್, ಅಕ್ಷಯ್, ಅನೀಶ್, ಜಗನ್ನಾಥ ನಾಯ್ಕ್, ಅರುಣಾ ರಾಮಕೃಷ್ಣ ಹೊಳ್ಳ, ವಿ.ಎಚ್.ಪಿ. ಉಪಾಧ್ಯಕ್ಷರಾದ ಕೆ.ಎನ್.ರಾಮಕೃಷ್ಣ ಸ್ವಾಗತಿಸಿ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಸಂತ್ ಕೆರೆಮನೆ ವಂದಿಸಿದರು.





