ಕೊಚ್ಚಿ: ಮಾರ್ಗದರ್ಶಕ ಮಂಡಲದ ನೇತೃತ್ವದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಕೇರಳದ 21 ಸನ್ಯಾಸಿಗಳು ಭಾಗವಹಿಸಲಿದ್ದಾರೆ ಎಂದು ಮಾರ್ಗದರ್ಶಕ ಮಂಡಲ ಘೋಷಿಸಿದೆ. ಕಾರ್ಯದರ್ಶಿ ಸ್ವಾಮಿ ಸತ್ಸ್ವರೂಪಾನಂದ ಸರಸ್ವತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ವಾಮಿ ಚಿದಾನಂದಪುರಿ (ಆದಿವತಾಶ್ರಮ, ಕೊಳತ್ತೂರು), ಸ್ವಾಮಿ ಪ್ರಜ್ಞಾನಾನಂದ ತೀರ್ಥಪಾದರು (ತೀರ್ಥಪಾದಾಶ್ರಮ, ವಳೂರು), ಸ್ವಾಮಿ ವಿವಿಕ್ತಾನಂದ ಸರಸ್ವತಿ (ಅಧ್ಯಕ್ಷರು, ಚಿನ್ಮಯ ಮಿಷನ್ ಕೇರಳ), ಸ್ವಾಮಿ ನಂದಾತ್ಮಜಾನಂದ (ಶ್ರೀ ರಾಮಕೃಷ್ಣ ಮಿಷನ್, ತ್ರಿಶೂರ್), ಸ್ವಾಮಿ ಅಧ್ಯಾತ್ಮಾನಂದ ಸರಸ್ವತಿ (ಆಚಾರ್ಯ, ಸಂಬೋಧ ಪ್ರತಿಷ್ಠಾನ, ಕೇರಳ) , ಸ್ವಾಮಿ ಸತ್ಸ್ವರೂಪಾನಂದ ಸರಸ್ವತಿ (ಜನರಲ್ ಸೆಕ್ರೆಟರಿ, ಮಾರ್ಗದರ್ಶಕ ಮಂಡಲ), ಸ್ವಾಮಿ ವೀರೇಶ್ವರಾನಂದ (ಶಿವಗಿರಿ ಮಠ, ವರ್ಕಲ), ಸ್ವಾಮಿ ಡಾ. ಧರ್ಮಾನಂದ (ರಮಾನಂದ ಆಶ್ರಮ, ವಾಘಿಕ್ಕಡವು), ಸ್ವಾಮಿ ಅಯ್ಯಪ್ಪದಾಸರು (ತತ್ವಮಸಿ ಆಶ್ರಮ, ತೋಡುಪುಳ), ಸ್ವಾಮಿ ವೇದಾಮೃತಾನಂದಪುರಿ (ಅಮೃತಾನಂದಮಯಿಮಠ, ವಲ್ಲಿಕ್ಕಾವು), ಸ್ವಾಮಿ ಹಂಸಾನಂದಪುರಿ (ನರ ನಾರಾಯಣ ಆದಿವತಾಶ್ರಮ, ಮೀನಂಗಡಿ), ಸ್ವಾಮಿ ಅಂಬಿಕಾನಂದ ಸರಸ್ವತಿ (ಅಂಬಿಕಾನಂದ ಆಶ್ರಮ, ಅಟ್ಟಿಂಗಲ್), ಸ್ವಾಮಿ ಬೋಧೇಂದ್ರ ತೀರ್ಥರು (ಆನಂದ ಧಾಮ್, ಕೇರಳಪುರಂ, ಕೊಲ್ಲಂ), ಸ್ವಾಮಿ ದೇವಚೈತನ್ಯಾನಂದ ಸರಸ್ವತಿ (ಅಂತರರಾಷ್ಟ್ರೀಯ ಶ್ರೀ ಕೃಷ್ಣ ಕೇಂದ್ರ, ಕೊಡಕರ), ಬ್ರಹ್ಮಚಾರಿ ಸುಧೀರ್ ಚೈತನ್ಯ, ಸ್ವಾಮಿ (ಪ್ರಣವಾನಂದ ಸರಸ್ವತಿ, ಸಂಬೋಧ್ ಫೌಂಡೇಶನ್, ತ್ರಿಶೂರ್), ಸ್ವಾಮಿ ಆನಂದ ಚೈತನ್ಯ (ಶುಭಾನಂದ ಶಾಂತಿ ಆಶ್ರಮ, ಪೆರುನಾಡ್, ರಾನ್ನಿ), ಸ್ವಾಮಿ ಕೃಷ್ಣಮಯಾನಂದ ತೀರ್ಥಪಾದರು (ವಿದ್ಯಾಧಿರಾಜ ತೀರ್ಥಪಾದಾಶ್ರಮ, ಪನ್ಮನ), ಸ್ವಾಮಿನಿ ಕೃμÁ್ಣನಂದಮಯೀಪೂರ್ಣ ತೀರ್ಥ (ಶ್ರೀ ವಿಜಯಾನಂದ ಆಶ್ರಮ, ಕಿಡಂಗನ್ನೂರು, ಅರಣಮುಲ), ಸ್ವಾಮಿನಿ ಸತ್ಯಪ್ರಿಯಾನಂದ ಸರಸ್ವತಿ (ನಿತ್ಯಾನಂದ ಆಶ್ರಮ, ಪಾಲಕ್ಕಾಡ್), ಸ್ವಾಮಿನಿ ಅಂತರ್ಯೋಗಿನಿ ತೀರ್ಥ (ತೀರ್ಥಪಾದಾಶ್ರಮ, ವಝೂರ್)ಕೇರಳದಿಂದ ಭಾಗವಹಿಸುವರು.
ಸನ್ಯಾಸಿಗಳು ಜನವರಿ 21 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿ 31 ರಂದು ಹಿಂತಿರುಗುತ್ತಾರೆ. ಕೇಂದ್ರೀಯ ಮಾರ್ಗದರ್ಶಕ ಮಂಡಲ ಯೋಗಂ, ಯುವ ಸನ್ಯಾಸಿಗಳ ಸಮ್ಮೇಳನ, ಸನ್ಯಾಸಿಗಳ ಮಹಿಳಾ ಸಮ್ಮೇಳನ ಮತ್ತು ಹಿರಿಯ ಸನ್ಯಾಸಿಗಳ ಸಮ್ಮೇಳನದಂತಹ ವಿವಿಧ ಹಂತಗಳಲ್ಲಿ ನಡೆಯುವ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಸ್ವಾಮಿ ಸತ್ಸ್ವರೂಪಾನಂದ ಸರಸ್ವತಿ ಹೇಳಿರುವರು.





