ಕುಂಬಳೆ: ಕಳೆದ 24 ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ, ಕಲೆ, ಕ್ರೀಡೆ ಮತ್ತು ದತ್ತಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಯ್ಯಾರ್ ಗ್ರೀನ್ ಸ್ಟಾರ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್‍ನ 25ನೇ ವಾರ್ಷಿಕೋತ್ಸವ ವರ್ಷಪೂರ್ತಿ ಕಾರ್ಯಕ್ರಮಗಳು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜ.26 ರಿಂದ ಮೊದಲ್ಗೊಂಡು ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಒಂದು ವರ್ಷ ಅವಧಿಯ ಆಚರಣೆಗಳು 2026ರ ಜನವರಿ 26 ರಂದು ಮುಕ್ತಾಯಗೊಳ್ಳುತ್ತವೆ. ಪ್ರಮುಖ ಕಾರ್ಯಕ್ರಮದ ಭಾಗವಾಗಿ, ಡಫ್ ಮುಟ್ಟ್ ಸ್ಪರ್ಧೆ, ಎ.ಐ,.ವಿದ್ಯಾರ್ಥಿ ಸಭೆ, ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಸೈಬರ್ ತಂತ್ರಜ್ಞಾನ ಅರಿವು, ಮಾದಕವಸ್ತು ಜಾಗೃತಿ, ಈಜು ತರಬೇತಿ, ಅಗ್ನಿಶಾಮಕ ಮತ್ತು ರಕ್ಷಣಾ ಜಾಗೃತಿ, ಮದರಂಗಿ ಉತ್ಸವ, ರೈತರ ದಿನಾಚರಣೆ, ಆಹಾರ ಉತ್ಸವ ಮತ್ತು ಚೆಸ್ ಸ್ಪರ್ಧೆಗಳು ಮುಂದಿನ ಒಂದು ವರ್ಷದ ಅವಧಿಯಲ್ಲಿ ನಡೆಯಲಿದೆ.
ಜ.26 ರಂದು ಭಾನುವಾರ ಸಂಜೆ 6.30ಕ್ಕೆ ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಒಂದು ವರ್ಷದ ಕಾರ್ಯಕ್ರಮ ಉದ್ಘಾಟಿಸುವರು. ಸಂಘಟನಾ ಸಮಿತಿ ಅಧ್ಯಕ್ಷ ಅಬೂಬಕರ್ ರಾಯಲ್ ಬೋಳಾರ್ ಅಧ್ಯಕ್ಷತೆ ವಹಿಸುವರು. ಸಂಚಾಲಕ ಝಡ್.ಎ. ಕಯ್ಯಾರ್ ನೇತೃತ್ವ ವಹಿಸುವರು. ಶಾಸಕ ಎ.ಕೆ.ಎಂ. ಅಶ್ರಫ್, ಎನ್.ಎ. ನೆಲ್ಲಿಕುನ್ನು, ಸೈಯದ್ ಯು.ಕೆ. ಸೈಫುಲ್ಲಾ ತಂಙಳ್:,ಸೈಯದ್ ಪೂಕ್ಕೋಯ ತಂಙಳ್, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ, ಫಾ. ವಿಶಾಲ್ ಮೆಲ್ವಿಲ್ಲೆ ಮೋನಿಸ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮುಹಮ್ಮದ್ ಹನೀಫ್, ಜಿಲ್ಲಾ ಪಂಚಾಯತಿ ಸದಸ್ಯ ರೆಹಮಾನ್ ಗೋಲ್ಡನ್, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ , ಕುಂಬಳೆ ಠಾಣಾ ಸಿ.ಐ. ಕೆ.ಪಿ.ವಿನೋದ್ ಕುಮಾರ್, ಅಜೀಜ್ ಮರಿಕೆ, ರಜಾಕ್ ಚಿಪ್ಪಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಅಬೂಬಕರ್ ರಾಯಲ್ ಬೋಳಾರ್, ಸಂಚಾಲಕ ಝಡ್.ಎ. ಕಯ್ಯಾರ್, ಸಂಘಟನಾ ಸಮಿತಿಯ ಪದಾಧಿಕಾರಿಗಳಾದ ಹುಸೇನ್ ಕೆ.ಕೆ. ನಗರ, ಸಿದ್ದೀಕ್ ಜೋಡುಕಲ್ಲು ಮತ್ತು ನೌಶಾದ್ ಪಟ್ಲ ಉಪಸ್ಥಿತರಿದ್ದರು.




.jpg)
