ಪರವೂರು: ನಕಲಿ ಆಧಾರ್ ಕಾರ್ಡ್ ಬಳಸಿ ಕೇರಳದಲ್ಲಿ ವಾಸವಿದ್ದ 27 ಮಂದಿ ಬಾಂಗ್ಲಾದೇಶಿಗಳನ್ನು ಬಂಧಿಸಲಾಗಿದೆ. ಅವರನ್ನು ಉತ್ತರ ಪರವೂರಿನಿಂದ ಬಂಧಿಸಲಾಗಿದೆ.
ಅವರೆಲ್ಲೆ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಂಡವನ್ನು ಬಂಧಿಸಲಾಯಿತು.
ಈ ಹಿಂದೆ ಏಳು ಬಾಂಗ್ಲಾದೇಶಿಗಳನ್ನು ಇದೇ ರೀತಿ ಬಂಧಿಸಲಾಗಿತ್ತು. ಅವರನ್ನು ಎರ್ನಾಕುಳಂ ಗ್ರಾಮೀಣ ಪ್ರದೇಶದಿಂದ ಬಂಧಿಸಲಾಗಿತ್ತು. ಆದರೆ ಇಷ್ಟೊಂದು ಜನರನ್ನು ಒಟ್ಟಿಗೆ ಬಂಧಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಗೌಪ್ಯ ಮಾಹಿತಿಯ ಆಧಾರದ ಮೇಲೆ ನಡೆಸಿದ ತನಿಖೆಯ ವೇಳೆ ಅವರನ್ನು ಬಂಧಿಸಲಾಗಿದೆ. ಅವರನ್ನು ಎಟಿಎಸ್ ಮತ್ತು ಪೋಲೀಸರು ಬಂಧಿಸಿದರು.
ಅವರು ಮೂರು ತಿಂಗಳ ಹಿಂದೆ ಇಲ್ಲಿಗೆ ಆಗಮಿಸಿರುವುದಾಗಿ ಹೇಳಿದ್ದಾರೆ. ಆದರೆ ಪೋಲೀಸರು ಇದನ್ನು ನಂಬಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ಅವರು ಕೇರಳಕ್ಕೆ ಹೇಗೆ ಬಂದರು ಮತ್ತು ಅವರಿಗೆ ವಸತಿ ಸೌಲಭ್ಯವನ್ನು ಯಾರು ಒದಗಿಸಿದರು ಎಂಬುದರ ಕುರಿತು ತನಿಖೆ ನಡೆಸಲಿದ್ದಾರೆ. ಇದೇ ವೇಳೆ, ಇಷ್ಟೊಂದು ಜನರು ಒಟ್ಟಿಗೆ ವಾಸಿಸುತ್ತಿರುವುದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ ಎಂದು ನಿರ್ಣಯಿಸಲಾಗಿದೆ.





