HEALTH TIPS

3 ಯುದ್ಧ ನೌಕೆಗಳ ಸೇರ್ಪಡೆ; ನೌಕಾಪಡೆಗೆ ಆನೆಬಲ

 ಮುಂಬೈ (PTI): ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ಕ್ಷಿಪಣಿ ಧ್ವಂಸಕ 'ಸೂರತ್', ಯುದ್ಧನೌಕೆ 'ನೀಲಗಿರಿ' ಹಾಗೂ ಜಲಾಂತರ್ಗಾಮಿ 'ವಾಗ್ಶೀರ್' ನೌಕೆಗಳನ್ನು ಬುಧವಾರ ಇಲ್ಲಿನ ನೌಕಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸೇರ್ಪಡೆ ಮಾಡಲಾಯಿತು.


ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂರು ಯುದ್ಧನೌಕೆಗಳನ್ನು ಏಕ ಕಾಲಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಯಿತು.

 ಐಎನ್‌ಎಸ್‌ ನೀಲಗಿರಿ- ಪಿಟಿಐ ಚಿತ್ರ

- ಸಮಾರಂಭದಲ್ಲಿ ಪ್ರಧಾನಿ ಹೇಳಿದ್ದು

* ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವು 'ಮೊದಲ ಪ್ರತಿಸ್ಪಂದಕ' ಆಗಿ ಹೊರಹೊಮ್ಮಿದೆ. ನೂರಾರು ಜೀವಗಳನ್ನು ಉಳಿಸಿದೆ. ಸಾವಿರಾರು ಕೋಟಿ ಮೌಲ್ಯದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸರಕುಗಳಿಗೆ ಸುರಕ್ಷೆ ಒದಗಿಸುತ್ತಿದೆ

* ಭಾರತ ಯಾವಾಗಲೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತಯಾನ ಸುರಕ್ಷತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯನ್ನು ಬೆಂಬಲಿಸುತ್ತದೆ

* ದೇಶದ ರಕ್ಷಣಾ ಉತ್ಪಾದನೆಯು ₹1.25 ಲಕ್ಷ ಕೋಟಿ ದಾಟಿದೆ. 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ

* ಕಳೆದ ದಶಕದಲ್ಲಿ ಸೇರ್ಪಡೆಗೊಂಡ 40 ನೌಕಾ ಹಡಗುಗಳಲ್ಲಿ 39 ನೌಕೆಗಳು ಭಾರತೀಯ ಹಡಗುಕಟ್ಟೆಗಳಲ್ಲಿ ನಿರ್ಮಾಣವಾಗಿವೆ. ಇದು 'ಮೇಕ್ ಇನ್ ಇಂಡಿಯಾ'ಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ

\* ₹1.5 ಲಕ್ಷ ಕೋಟಿ ಮೌಲ್ಯದ 60 ಹಡಗುಗಳ ನಿರ್ಮಾಣ ಪ್ರಗತಿಯಲ್ಲಿವೆ. ಇವು ದೇಶದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಅಪಾರ ಪರಿಣಾಮ ಬೀರಿದೆ

* ವಿಜ್ಞಾನಿಗಳು 6000 ಮೀಟರ್ ಆಳ ತಲುಪಲು ಸಾಧ್ಯವಾಗಿಸುವ ಸಮುದ್ರಯಾನ ಯೋಜನೆಯು ಆಳ ಸಮುದ್ರದ ಸಂಪನ್ಮೂಲಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ದೇಶದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ

ನೌಕಾಪಡೆಗೆ ಸೇರಿದ 3 ನೌಕೆಗಳ ವಿಶೇಷತೆ

ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನೌಕಾಪಡೆಗೆ ಸೇಪರ್ಡೆಯಾದ ಮೂರು ನೌಕೆಗಳು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ನೌಕಾಪಡೆಗೆ ಇವು ಸಾಕಷ್ಟು ಬಲ ತುಂಬಲಿವೆ. ಐಎನ್‌ಎಸ್‌ ನೀಲಗಿರಿ: ಇದು ಪ್ರಾಜೆಕ್ಟ್ 17 ಆಲ್ಫಾದ ಮೊದಲ ಶ್ರೇಣಿಯ ಹಡಗು. ಇದು ಸ್ಟೆಲ್ತ್ ಕ್ಷಿಪಣಿ ಯುದ್ಧನೌಕೆ. ಇದು ಶತ್ರು ದೇಶಗಳ ರೇಡಾರ್‌ ಕಣ್ಣಿಗೆ ಸಿಗದು. ಕಡಲ ಕಣ್ಗಾವಲಿಗೆ ಅಗತ್ಯವಿರುವ ಸುಧಾರಿತ ವಿನ್ಯಾಸದ ರಕ್ಷಣಾ ಸಾಧನಗಳನ್ನು ಇದು ಒಳಗೊಂಡಿದೆ. ಶತ್ರು ನೌಕೆಗಳ ಮೇಲೆ ಅತಿ ಹತ್ತಿರದಿಂದ ದಾಳಿ ನಡೆಸುವ ಕೋವಿಗಳನ್ನು ಒಳಗೊಂಡಿದೆ. ಐಎನ್‌ಎಸ್‌ ಸೂರತ್‌: ಪ್ರಾಜೆಕ್ಟ್-15 ಬ್ರಾವೋ ಶ್ರೇಣಿಯ ನಾಲ್ಕನೇ ಯುದ್ಧನೌಕೆ ಇದು. ಗುರಿ ನಿರ್ದೇಶಿತ ಕ್ಷಿಪಣಿಗಳನ್ನು ಧ್ವಂಸಗೊಳಿಸುತ್ತದೆ. ಇದು ಸೂಪರ್‌ಸಾನಿಕ್‌ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಬರಾಕ್-8 ಮಧ್ಯಮ ಶ್ರೇಣಿಯ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾಗಿದೆ.

ಜಲಾಂತರ್ಗಾಮಿಗಳನ್ನು ಧ್ವಂಸಗೊಳಿಸುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್‌ಗಳು ಭಾರಿ ತೂಕದ ಕ್ಷಿಪಣಿಗಳು ಮತ್ತು ರಾಕೆಟ್‌ ಲಾಂಚರ್‌ಗಳನ್ನು ಇದಕ್ಕೆ ಅಳವಡಿಸಲಾಗಿದೆ. ಜಲಾಂತರ್ಗಾಮಿ 'ವಾಗ್ಶೀರ್': 6ನೇ ಸ್ಕಾರ್ಪಿನ್‌ ಶ್ರೇಣಿಯ ಜಲಂತರ್ಗಾಮಿ ನೌಕೆ ಇದು. ಡೀಸೆಲ್- ವಿದ್ಯುತ್‌ ಚಾಲಿತವಾದುದು. ವೈರ್-ಗೈಡೆಡ್ ಟಾರ್ಪಿಡೊಗಳು ಹಡಗು ನಿಗ್ರಹ ಕ್ಷಿಪಣಿಗಳು ಮತ್ತು ಸುಧಾರಿತ ಸೋನಾರ್ ವ್ಯವಸ್ಥೆಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ. ಕಡಲ ಕಣ್ಗಾವಲು ವಿಶೇಷ ಕಾರ್ಯಾಚರಣೆಗಳು ಗೂಢಚಾರಿಕೆ ಹಾಗೂ ಮೇಲ್ಮೈ ದಾಳಿ ಜಲಂತಾರ್ಗಾಮಿ ದಾಳಿಗಳನ್ನು ತಡೆಯುವ ವ್ಯವಸ್ಥೆಯನ್ನು ಇದು ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries