ತಿರುವನಂತಪುರಂ: ತಿರುವನಂತಪುರಂ ರೈಲ್ವೆ ವಿಭಾಗದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ವರ್ಷ 1,716.42 ಕೋಟಿ ರೂ.ಗಳ ಆದಾಯವಿತ್ತು ಎಂದು ತಿರುವನಂತಪುರಂ ವಿಭಾಗೀಯ ವ್ಯವಸ್ಥಾಪಕ ಡಾ. ಮನೀಶ್ ಧಪ್ಯಾಲ್ ಹೇಳಿರುವರು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಒಂಬತ್ತು ಪ್ರತಿಶತ ಹೆಚ್ಚಳವಾಗಿದೆ.
ಕಳೆದ ವರ್ಷ ತಿರುವನಂತಪುರಂ ರೈಲ್ವೆ ವಿಭಾಗದ ವಿವಿಧ ನಿಲ್ದಾಣಗಳಿಂದ 81.0 ಕೋಟಿ ಜನರು ಪ್ರಯಾಣಿಸಿದ್ದಾರೆ. ಸರಕು ಸಾಗಣೆಯಲ್ಲಿ 305.19 ಕೋಟಿ ರೂ. ಮತ್ತು ಟಿಕೆಟ್ ರಹಿತ ವಿಭಾಗದಲ್ಲಿ 24.38 ಕೋಟಿ ರೂ. ಗಳಿಸಿದೆ. ಶಬರಿಮಲೆ-ಮಂಡಲ ವಿಶೇಷ ರೈಲುಗಳಲ್ಲಿ ಐದು ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
75 ಕಿಲೋಮೀಟರ್ ರಸ್ತೆಗಳನ್ನು ನವೀಕರಿಸಲಾಯಿತು ಮತ್ತು 10 ಸೇತುವೆಗಳನ್ನು ಪುನರ್ನಿರ್ಮಿಸಲಾಯಿತು. ಎಲೆಕ್ಟ್ರಾನಿಕ್ ಇಂಟರ್‍ಲಾಕಿಂಗ್ ವ್ಯವಸ್ಥೆಯ ಮೂಲಕ 32 ನಿಲ್ದಾಣಗಳಲ್ಲಿ ಸಿಗ್ನಲ್‍ಗಳನ್ನು ಮೇಲ್ದರ್ಜೆಗೇರಿಸಲಾಗಿದೆ.





