ಕೊಚ್ಚಿ: ಉತ್ತರ ಭಾರತದಲ್ಲಿ ನಕ್ಸಲ್ ಚಟುವಟಿಕೆ ಕಟ್ಟುನಿಟ್ಟಾಗಿ ನಿಗ್ರಹಿಸಲು ಪೊಲೀಸರು ಮುಂದಾಗಿದ್ದು, ಇದರಿಂದ ನಕ್ಸಲರು ಕೇರಳದತ್ತ ಪಲಾಯನಮಾಡಿ ಅಲ್ಲಿ ಠಿಕಾಣಿ ಹೂಡಲು ಸಾಧ್ಯತೆಯಿರುವುದಾಗಿ ಕೇಂದ್ರ ಗುಪ್ತಚರ ವಿಭಾಗ ಸೂಚನೆ ನಿಡಿದೆ.
ಈಗಾಗಲೇ ಉತ್ತರ ಭಾರತದ ನಾನಾ ರಾಜ್ಯಗಳಿಂದ ಕಾರ್ಮಿಕರು ಕೇರಳದತ್ತ ಕೆಲಸ ಅರಸಿಕೊಂಡುಬರುತ್ತಿದ್ದು, ಕಾರ್ಮಿಕರ ಸೋಗಿನಲ್ಲಿ ನಕ್ಸಲರೂ ಬಂದು ಸೇರುವ ಸಾಧ್ಯತೆಯಿದೆ. ಈUಗಲೇ ಛತ್ತೀಸ್‍ಗಡ್, ಝಾರ್ಖಂಡ್, ಒಡಿಶಾದಲ್ಲಿ ನಕ್ಸಲರ ವಿರುದ್ಧ ಪೊಲೀಸ್, ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಚುರುಕುಗೊಳಿಸುತ್ತಿದ್ದಂತೆ ನಕ್ಸಲರು ದ.ಭಾರತದತ್ತ ಮುಖಮಾಡುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಹಲವು ಮಂದಿ ನಕ್ಸಲ್ ಮುಖಂಡರು ಪೊಲೀಸರ ಗುಂಡಿಗೆ ಬಲಿಯಾಗಿದ್ದು, ಉಳಿದಿರುವ ಕೆಲವು ನೇತಾರರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹಾಗೂ ಸಂಘಟನೆ ಚಟುವಟಿಕೆ ಸಕ್ರಿಯಗೊಳಿಸಲು ಕೇರಳದತ್ತ ಸಾಗಿ ಇವಿಧ ಜಿಲ್ಲೆಗಳಲ್ಲಿ ನೆಲೆಕಂಡುಕೊಳ್ಳುವ ಸಾಧ್ಯತೆಯಿದೆ. ನಕ್ಸಲರ ಪ್ರಬಲ ವಿಭಾಗ ಸೆಂಟ್ರಲ್ ರೀಜ್ಯನಲ್ ಬ್ಯೂರೋ ದಟ್ಟಾರಣ್ಯಗಳಲ್ಲಿದ್ದುಕೊಂಡೇ ತನ್ನ ಭೂಗತ ಚಟುವಟಿಕೆ ಮುಂದುವರಿಸುತ್ತಿದ್ದು, ಇದನ್ನು ಹತ್ತಿಕ್ಕಲು ಕೇಂದ್ರ ವಿವಿಧ ರಾಜ್ಯದ ದಟ್ಟಾರಣ್ಯಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದೆ. ನಕ್ಸಲ್ ಮುಖಂಡರನ್ನ ಹುಡುಕಿ ಅವರನ್ನು ಜೀವಂತ ಸೆರೆಹಿಡಿಯುವ ಅಥವಾ ಗುಂಡಿಕ್ಕಿ ಕೊಲ್ಲುವ ಕಾರ್ಯಾಚರಣೆಯನ್ನೂ ತೀವ್ರಗೊಳಿಸಿದೆ. ಈಗಾಗಲೇ ಕೆಲವು ನಕ್ಸ¯ರು ಕರ್ನಾಟಕ ಪೊಲೀಸರ ಮುಂದೆ ಶರಣಾಗಿದ್ದು, ಇನ್ನು ಕೆಲವರು ತಮಿಳ್ನಾಡು, ಕೇರಳದ ಅರಣ್ಯದಲ್ಲಿ ತಲೆಮರೆಸಿಕೊಂಡಿರುವುದಾಘಿಯೂ ಕೇಂದ್ರ ಗುಪ್ಪಚರ ವಿಭಾಗ ಮಾಹಿತಿ ನೀಡಿದೆ.


