ಮಂಜೇಶ್ವರ: ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿರುವ ತಮ್ಮ ಪುತ್ರಿಯ ಚಿಕಿತ್ಸೆಗಾಗಿ ಪಡೆದ ಸಾಲ ಮರುಪಾವತಿಸಲಾಗದೆ, ಜಾಗ ಮತ್ತು ಮನೆ ಹರಾಜಾಗಿ ಹೋಗುವುದನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಡೆಹಿಡಿದಿದ್ದು, ಬ್ಯಾಂಕ್ ಸಾಲದ ಮೊತ್ತವನ್ನು ಪಾವತಿಸುವ ಭರವಸೆ ನೀಡಿದ್ದಾರೆ.
ಮೀಂಜ ಪಂಚಾಯಿತಿ ಚಾರ್ಲ ಬಾಳಿಯೂರು ನಿವಾಸಿ ಪ್ರಸಾದ್-ವೀಣಾ ದಂಪತಿ ಪುತ್ರಿ ತೀರ್ಥ ಪ್ರಸಾದ್ ಎಂಡೋಸಲ್ಫಾನ್ ಸಂಬಂಧಿ ಅಸೌಖ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಈ ಕುಟುಂಬ ಲಕ್ಷಾಂತರ ರೂ. ಖರ್ಚು ಮಾಡಿದೆ. ಈ ನಿಟ್ಟಿನಲ್ಲಿ ಕೇರಳ ಗ್ರಾಮೀಣ ಬ್ಯಾಂಕ್‍ನಿಂದ ಕುಟುಂಬ ಪಡೆದಿದ್ದ ಸಾಲ ಮರುಪಾವತಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಬ್ಯಾಂಕಿನವರು ಜಾಗ ಹಾಗೂ ಮನೆ ಹರಾಜುಗೊಳಿಸುವ ಬಗ್ಗೆ ನೋಟೀಸು ನೀಡಿದ್ದರು. 2024ರಲ್ಲಿ ಎರಡುವರೆ ಲಕ್ಷ ರೂ. ಪಡೆದ ಸಾಲದಲ್ಲಿ 2019ರ ವರೆಗೂ ಒಂದುವರೆ ಲಕ್ಷ ರು. ಪಾವತಿಸಿದ್ದರು. ಆ ನಂತರ ಕರೊನಾ ಹಾಗೂ ಇತರ ಸಮಸ್ಯೆಗಳಿಂದ ಕುಟುಂಬಕ್ಕೆ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ನಂತರ ಬ್ಯಾಂಕ್ ಸಾಲದ ಅಸಲು, ಬಡ್ಡಿ ಸಏರಿ 5ಲಕ್ಷ ರೂ. ಉಳಿದುಕೊಂಡಿತ್ತು. ಎಂಡೋ ಸಂತ್ರಸ್ತರ ಬ್ಯಾಂಕ್ ಸಾಲ ಮರುಪಾವತಿ ವಿಷಯದಲ್ಲಿ ಜಾಗ, ಮನೆ ಜಪ್ತಿ ಯಾ ಹರಾಜು ನಡೆಸಕೂಡದು ಎಂಬ ಆದೇಶದ ನಡುವೆಯೂ ಬ್ಯಾಂಕ್ ಅಧಿಕಾರಿಗಳು ಪ್ರಸಾದ್ ಕುಟುಂಬದ ಆರು ಸೆಂಟ್ ಜಾಗದಲ್ಲಿ ಕಟ್ಟಿಸಿದ್ದ ಮನೆ ಹಾಗೂ ಜಾಗ ಹರಾಜಿಗೆ ಸಂಬಂಧಿಸಿ ಬ್ಯಾನರ್ ಅಳವಡಿಸಿದ್ದರು.
ಸಂತ್ರಸ್ತ ಪುತ್ರಿ ತೀರ್ಥಳೊಂದಿಗೆ ಜೀವನ ನಡೆಸುತ್ತಿರುವ ಪ್ರಸಾದ್-ವಿಣಾ ದಂಪತಿಗೆ ಪುತ್ರಿಯ ಚಿಕಿತ್ಸಾವೆಚ್ಚ ಭರಿಸುವುದರ ಜತೆಗೆ ಸಾಲಮರುಪಾವತಿ ಅಸಾಧ್ಯದ ಮಾತಾಗಿತ್ತು. ಈ ಮಧ್ಯೆ ಬ್ಯಾಂಕ್ ನೋಟೀಸಿನಿಂದ ವಿಚಲಿತರಾದ ಕು
ಟುಂಬದ ಯಾತನೆ ಮನಗಂಡು ಶಾಸಕ ಎ.ಕೆ.ಎಂ ಅಶ್ರಫ್ ಗುರುವಾರ ಪ್ರಸಾದ್ ದಂಪತಿಯ ಬಾಳಿಯೂರಿನ ಮನೆಗೆ ಭೇಟಿ ನೀಡಿ ಬಾಕಿ ಮೊತ್ತ ಬ್ಯಾಂಕಿಗೆ ಪಾವತಿಸಿ ಮನೆ ಹಾಗೂ ಜಾಗದ ದಾಖಲೆ ತಂದೊಪ್ಪಿಸುವ ಭರವಸೆ ನೀಡಿದೆ. ಶಾಸಕರ ಭರವಸೆಯಿಂದ ಕುಟುಂಬ ನಿರಾಳವಾಗಿದೆ.






