ಕಾಸರಗೋಡು: ಶಾಲೆಗೆ ನಡೆದುಹೋಗುತ್ತಿದ್ದ ಪ್ಲಸ್‍ಟು ವಿದ್ಯಾರ್ಥಿನಿಯ ಕೈಹಿಡಿದೆಳೆದು ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡಿನಲ್ಲಿ ಹೋಟೆಲ್ ಕಾರ್ಮಿಕ, ಕುಂಬಳೆಯಲ್ಲಿ ವಾಸಿಸುತ್ತಿರುವ ಕಬೀರ್(34)ಎಂಬಾತನನ್ನು ಮೇಲ್ಪರಂಬ ಠಾಣೆ ಇನ್ಸ್‍ಪೆಕ್ಟರ್ ಕೆ. ಸಂತೋಷ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದುಹೋಗುತ್ತಿದ್ದ 17ರ ಹರೆಯದ ವಿದ್ಯಾರ್ಥಿನಿಯನ್ನು ಬೈಕಲ್ಲಿ ಕುಳಿತುಕೊಳ್ಳುವಂತೆ ಕೈಹಿಡಿದೆಳೆದಿದ್ದನು
ಬಸ್ ಪ್ರಯಾಣಿಕೆಯಾದಯುವತಿಯ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ಬಗ್ಗೆ ಈತನ ವಿರುದ್ಧ ಬೇಡಡ್ಕ ಠಾಣೆಯಲ್ಲಿ ಕೇಸು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





