ಕಾಸರಗೋಡು: ಬಸ್ಸಿನಲ್ಲಿ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ 15ರ ಹರೆಯದ ಬಾಲಕಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ, ಕುತ್ತಿಕ್ಕೋಲ್ ಪಯ್ಯಂಗಾನ ನಿವಾಸಿ ಪಿ. ರಾಜ ಎಂಬಾತನನ್ನು ನೀಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
2024 ಮೇ 10ರಂದು ಬಾಲಕ ತಾಯಿಯೊಂದಿಗೆ ನೀಲೇಶ್ವರದಿಂದ ಕಣ್ಣೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‍ಗೆ ಏರಿದ್ದನು. ತಾಯಿ ಬೇರೆ ಸೀಟಿನಲ್ಲಿ ಕುಳಿತಿದ್ದು, ಬಾಲಕ ಕುಳಿತಿದ್ದ ಸೀಟಿಗೆ ಆಗಮಿಸಿದ ನಿರ್ವಾಹಕ ರಾಜ ಕಿರುಕುಳ ನೀಡಿರುವುದು ಕೌನ್ಸೆಲಿಂಗ್‍ನಲ್ಲಿ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.





