ಕಾಸರಗೋಡು: ಪ್ರಾಚೀನ ಭಾರತೀಯ ಭಾμÁಶಾಸ್ತ್ರೀಯ ಪಠ್ಯಗಳಿಂದ ಆಧುನಿಕ ಭಾμÁಶಾಸ್ತ್ರ ರೂಪಗೊಂಡಿದೆ, ಪಾಶ್ಚಾತ್ಯರ ಆಧುನಿಕತೆ ಭಾರತೀಯ ಪಠ್ಯಗಳ ಅಧ್ಯಯನಕ್ಕೆ ಋಣಿ, ಯುರೋಪಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಕಲಿತ ಮಿಷನರಿಗಳು ವ್ಯಾಕರಣ, ಭಾಷಾಶಾಸ್ತ್ರಕ್ಕೆ ವೈಜ್ಞಾನಿಕ ಸ್ಪರ್ಶವನ್ನು ನೀಡಿದರು, ಭಾರತೀಯರು ಕೃತಘ್ನರಲ್ಲ, ಕಿಟಲ್, ಗುಂಡರ್ಟ್, ಕೇರಳದ ಪೌಲಿನೋಸ್ ಪಾದಿರಿ ಮುಂತಾದ ಮಿಷನರಿಗಳ ಕೆಲಸಗಳನ್ನು ಅವರ ತಾಯಿನಾಡಾದ ಜರ್ಮನಿಯಲ್ಲಿಯೇ ಅಷ್ಟಾಗಿ ನೆನಪಿಸಿಕೊಳ್ಳದಿದ್ದರೂ ಭಾರತದಲ್ಲಿ ನಾವು ಅವರನ್ನು ಸಂಭ್ರಮಿಸುತ್ತೇವೆ ಹಾಗೂ ಅವರನ್ನು ಎಂದಿಗೂ ಜೀವಂತವಾಗಿಟ್ಟುಕೊಳ್ಳುತ್ತೇವೆ ಎಂದು ಪೆರಿಯ ಕೇರಳ ಕೇಂದ್ರೀಯ ವಿವಿಯ ಭಾಷೆ ಮತ್ತು ತೌಲನಿಕ ಅಧ್ಯಯನ ನಿಕಾಯದ ಡೀನ್ ಡಾ. ಜೋಸೆಫ್ ಕೊಯಿಪ್ಪಲ್ಲಿ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಸಬರಮತಿ ಸಭಾಂಗಣದಲ್ಲಿ ಗುರುವಾರ ಕನ್ನಡ ವಿಭಾಗ ಆಯೋಜಿಸಿದ್ದ ಫರ್ಡಿನೆಂಡ್ ಕಿಟಲ್ ಮತ್ತು ಹರ್ಮನ್ ಗುಂಡರ್ಟ್ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಚರ್ಚೆ ಎಂಬ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ವಿಭಾಗಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಅದು ವಿಶ್ವವಿದ್ಯಾಲಯಕ್ಕೆ ಕೊಡುವ ಉತ್ತಮ ಕಾರ್ಯಕ್ರಮಗಳ ಸಂಖ್ಯೆ ಹಿರಿದು ಎಂದು ಶ್ಲಾಘಿಸಿದರು.
ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯ ಹೇರಿಕುದ್ರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾಷೆಯನ್ನು ನಾವು ಒಲಿಸಿಕೊಂಡರೆ ಮಾತ್ರ ಅದು ಒಳಗೊಳ್ಳಲ್ಪಡುತ್ತದೆ. ಪ್ರೀತಿ ಇಲ್ಲದೆ ಹೋದರೆ ಭಾಷೆಯೆಂಬ ಸೌಂದರ್ಯವನ್ನು ಕಲಿಯಲು ಸಾಧ್ಯವಿಲ್ಲ, ಭಾಷೆಯನ್ನು ಭಾರತದಲ್ಲಿ ಅರಿವಿಗೆ, ಜ್ಞಾನಕ್ಕೆ ಸಮೀಕರಿಸಿ ವಿವರಿಸಿಕೊಳ್ಳಲಾಗುತ್ತದೆ, 19ನೇ ಶತಮಾನದ ಅಂತ್ಯಭಾಗದಲ್ಲಿ, ಕಿಟೆಲ್, ಗುಂಡರ್ಟ್ ದ್ರಾವಿಡ ಭಾಷೆಗಳ ಏಳಿಗೆಗೆ ತಮ್ಮ ಜೀವನವನ್ನು ವಿನಿಯೋಗಿಸಿದ್ದಾರೆ ಎಂದು ನುಡಿದರು.
ಸ್ನಾತಕೋತ್ತರ ವಿದ್ಯಾರ್ಥಿನಿ ಜ್ಯೋತಿರ್ಲಕ್ಷ್ಮಿ ನಿರೂಪಿಸಿ, ವಿಭಾಗದ ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ವಂದಿಸಿದರು. ನಿಕಾಯದ ವಿವಿಧ ವಿಭಾಗಗಳ ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ಧರು.







