ಬದಿಯಡ್ಕ: ಪ್ರಖ್ಯಾತ ಸ್ವರ್ಣ ಉದ್ಯಮಿ, ಸಮಾಜಸೇವಕರಾಗಿದ್ದ ಜಿ.ಎಲ್.ಆಚಾರ್ಯ ಪುತ್ತೂರು ಅವರ ಶತಮಾನದ ಸ್ಮರಣೆ ಕಾರ್ಯಕ್ರಮ ಫೆ.9ರಂದು ಭಾನುವಾರ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯೊಂದಿಗೆ ಜರಗಲಿರುವುದು.
ಅಂದು ಅಪರಾಹ್ನ 3 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಮ ಭಟ್ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ನಾರಾಯಣ ಭಟ್ ಟಿ.ರಾಮಕುಂಜ ಸಂಸ್ಮರಣಾ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಶತಮಾನದ ನೆನಪಲ್ಲಿ ಕಿರುಹೊತ್ತಗೆ `ಬಂಗಾರ' ಬಿಡುಗಡೆಗೊಳ್ಳಲಿದೆ. ಪತ್ರಕರ್ತ ಯಕ್ಷಗಾನ ಕಲಾವಿದ ನಾ. ಕಾರಂತ ಪೆರಡಾಜೆ ಕೃತಿ ಪರಿಚಯ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀಪತಿ ಕಲ್ಲೂರಾಯ ಉಪಸ್ಥಿತರಿರುವರು. ಸಂಜೆ 5 ರಿಂದ ಆಚಾರ್ಯ ರತ್ನಾಕರ ವಿದ್ವಾನ್ ಶ್ರೀ ವಿಠಲ ರಾಮಮೂರ್ತಿ ಚೆನ್ನೈ ಇವರು ವಿಪ್ರಹಾರ್ ಬಳಗ ಚೆನ್ನೈ ಇವರೊಂದಿಗೆ ಪ್ರಸ್ತುತಪಡಿಸುವ ಕರ್ನಾಟಕ ಶೈಲಿಯ ವಿಶೇಷ ವಾದ್ಯಸಂಗೀತ ಜರಗಲಿದೆ. ವಯಲಿನ್‍ನಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ, ಮಂಡೋಲಿನ್‍ನಲ್ಲಿ ವಿದ್ವಾನ್ ವಿಶ್ವಾಸ್ ಹರಿ ಚೆನ್ನೈ, ಕೀಬೋರ್ಡ್‍ನಲ್ಲಿ ಪ್ರಣವ್ ಆರ್ ವಿ ಚೆನ್ನೈ, ತಾಳವಾದ್ಯದಲ್ಲಿ ವಿದ್ವಾನ್ ಹರಿಹರನ್ ಸುಂದರ್ ರಾಮನ್ ಚೆನ್ನೈ ಜೊತೆಗೂಡಲಿದ್ದಾರೆ.





-G.L.ACHARYA.jpg)
