HEALTH TIPS

ಏನಿದು ಅಮೆರಿಕವನ್ನೇ ನಡುಗಿಸಿದ ಚೀನಾದ ಉಚಿತ AI ಡೀಪ್‌ಸೀಕ್? ಬಳಕೆ, ಡೌನ್ಲೋಡ್ ಹೇಗೆ?

ಜಗತ್ತೇ ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಹಿಂದೆ ಬಿದ್ದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಎಐ ಬಳಕೆಯಾಗುತ್ತಿದೆ. ಈ ಪೈಕಿ ಗೂಗಲ್‌ನ ಓಪನ್ ಎಐ, ಜೆಮಿನಿ ಸೇರಿದಂತೆ ಹಲವು ಸೇವೆಗಳು ಲಭ್ಯವಿದೆ. ಚಾಟ್‌ಜಿಪಿಟಿ ಮೂಲಕ ಅಮೆರಿಕದ ಎಐ ತಂತ್ರಜ್ಞಾನ ವಿಶ್ವದಲ್ಲೇ ಬಳಕೆಯಾಗುತ್ತಿದೆ.

ಇದಕ್ಕೆ ಅಮೆರಿಕ ಕಂಪನಿಗಳು ದೊಡ್ಡ ಮೊತ್ತ ಚಾರ್ಜ್ ಮಾಡುತ್ತಿದೆ. ಆದರೆ ಕೇವಲ ಒಂದೇ ತಿಂಗಳಲ್ಲಿ ಆರ್ಟೀಫೀಶಿಯಲ್ ಇಂಟಲಿಜೆನ್ಸ್ ಅಭಿವೃದ್ಧಿಪಡಿಸಿ, ಚಾಟ್‍‌ಜಿಪಿಟಿ ಸೇರಿದಂತೆ ಇತರ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಫಲಿತಾಂಶ ನೀಡಬಲ್ಲ ಎಐ ಡೀಪ್‌ಸೀಕ್‌ ಆಯಪ್‌ನ್ನು ಚೀನಾ ಬಿಡುಗಡೆ ಮಾಡಿದೆ. ಅತೀ ಕಡಿಮೆ ವೆಚ್ಚದಲ್ಲಿ ಈ ಎಐ ಸರ್ವೀಸ್ ಅಭಿವೃದ್ಧಿ ಮಾಡಲಾಗಿದೆ. ಇಷ್ಟೇ ಅಲ್ಲ, ಉಚಿತ ಡೌನ್ಲೋಡ್ ಕೂಡ ನೀಡಿದೆ. ಇದು ಅಮೆರಿಕದ ಷೇರುಮಾರುಕಟ್ಟೆಯಲ್ಲಿ ಭಾರಿ ಬಿರುಗಾಳಿ ಸೃಷ್ಟಿಸಿದೆ.

ಡೀಪ್‌ಸೀಕ್ ಲಾಂಚ್ ಬೆನ್ನಲ್ಲೇ ಅಮೆರಿಕ ಷೇರುಮಾರುಕಟ್ಟೆಯಲ್ಲಿ NVIDIA ಕಂಪನಿಯ ಷೇರುಗಳು ಶೇಕಡಾ 17ರಷ್ಟು ಕುಸಿತ ಕಂಡಿದೆ. ಕಾರಣ ಚೀನಾದ ಡೀಪ್‌ಸೀಕ್ ಎಐ ಅಮೆರಿಕದ ಒಪನ್ ಎಐನ ಚಾಟ್‌ಜಿಪಿಟಿಗಿಂತ ಹೆಚ್ಚು ನಿಖರತೆ, ಉತ್ತಮ ಫಲಿತಾಂಶ ನೀಡುತ್ತದೆ. ಇಷ್ಟು ದಿನ ಅಮೆರಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಿಪ್‌ಗೆ ಅಭಿವೃದ್ಧಿಗೆ ವರ್ಷಾನುಗಟ್ಟಲೇ ಸಮಯ ತೆಗೆದುಕೊಳ್ಳುತ್ತಿತ್ತು. ಬಳಿಕ ಸಾವಿರಾರು ಕೋಟಿ ರೂಪಾಯಿಯನ್ನು ಇದರ ಮೇಲೆ ಹೂಡಿಕೆ ಮಾಡಿದೆ. ಹೀಗಾಗಿ ಅಮೆರಿಕ ಪದೇ ಪದೇ ಎಐ ಸರ್ವೀಸ್‌ ಇತರ ರಾಷ್ಟ್ರಗಳಿಗೆ ಆರ್ಥಿಕ ಹೊರೆಯಾಗಲಿದೆ ಎಂದಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದ ಚೀನಾದ ಡೀಪ್‌ಸೀಕ್, ಅತೀ ಕಡಿಮೆ ಬೆಲೆಯಲ್ಲಿ ಅಮೆರಿಕದ ಎಐ ಸರ್ವೀಸ್‌ಗಿಂತ ಉತ್ತಮ ಎಐ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದೆ.

ಡೀಪ್‌ಸೀಕ್ ಚೀನಾ ಅಭಿವೃದ್ಧಿಪಡಿಸಿದ ಎಐ ಸರ್ವೀಸ್. ಜನವರಿ 10 ರಂದು ಡೀಪ್‌ಸೀಕ್ ವಿಶ್ವಾದ್ಯಂತ ಲಾಂಚ್ ಆಗಿದೆ. ಕೆಲವೇ ದಿನಗಳಲ್ಲಿ ಡೀಪ್‌ಸೀಕ್ ವಿಶ್ವದ ಗಮನಸೆಳೆದಿದೆ. ಡೀಪ್‌ಸೀಕ್ ಮೂಲಕ ಚೀನಾ ವಿಶ್ವದ ಮೊದಲ ಉಚಿತ ಚಾಟ್‌ಬಾಟ್ ಸರ್ವೀಸ್ ಲಾಂಚ್ ಮಾಡಿದೆ. ವಿಶೇಷ ಅಂದರೆ ಜನವರಿ 27ರ ಹೊತ್ತಿದೆ ಅಂದರೆ 17 ದಿನಗಳಲ್ಲಿ ಅಮೆರಿಕದ ಚಾಟ್‌ಜಿಪಿಟಿಗಿಂತ ಹೆಚ್ಚು ಡೌನ್ಲೋಡ್ ಕಂಡಿದೆ. ಐಒಎಸ್ ಆಯಪ್ ಸ್ಟೋರ್ ‌ನಲ್ಲಿ ಗರಿಷ್ಠ ಡೌನ್ಲೋಡ್ ದಾಖಲೆ ಪಡೆದಿದೆ.

ಡೀಪ್‌ಸೀಕ್ ಪ್ರಮುಖವಾಗಿ ಜನರೇಟೀವ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಟ್‌ಬಾಟ್ ಒಪನ್ ಸೋರ್ಸ್, ಉಚಿತವಾಗಿ ಬಳಕೆಗೆ ಲಭ್ಯವಿದೆ. ಅಮೆರಿಕದ ಜನಪ್ರಿಯ ಎಐ ಸರ್ವೀಸ್ ಉಚತವಾಗಿ ಲಭ್ಯವಿಲ್ಲ. ವಿಶೇಷ ಅಂದರೆ ಡೀಪ್‌ಸೀಕ್ ಸ್ಟಾರ್ಟ್‌ಅಪ್ ಸೋರ್ಸ್ ಕೋಡ್ ಹಾಗೂ ಡಿಸೈನ್ ಡಾಕ್ಯುಮೆಂಟ್ ಆಯಕ್ಸೆಸ್ ನೀಡಿದೆ. ಇದಕ್ಕಾಗಿ ಚೀನಾ ತನ್ನ ಪ್ರತಿಷ್ಠಿತ ಎಐ ಯುನಿವರ್ಸಿಟಿಗಳಿಂದ ಎಂಜಿನೀಯರ್ಸ್ ನೇಮಕ ಮಾಡಿಕೊಂಡಿದೆ.

ಚೀನಾದ ಲಿಯಾನ್ ವೆನ್‌ಫೆಂಗ್ ಈ ಡೀಪ್ ಸಿಂಗ್ ಸ್ಟಾರ್ಟ್‌ಅಪ್ ಸಂಸ್ಥಾಪಕ. ಕೇವಲ 6 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದಲ್ಲಿ ಜಗತ್ತನ್ನೇ ನಿಬ್ಬೆರೆಗಾಗಿಸುವ ಡೀಪ್‌ಸೀಕ್ ಎಐ ಸರ್ವೀಸ್ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಡೀಪ್‌ಸೀಕ್ ಆರ್1 ಹಾಗೂ ಆರ್ ಝಿರೋ ಅನ್ನೋ ಎರಡು ಮಾಡೆಲ್‌ಗಳಲ್ಲಿ ಲಭ್ಯವಿದೆ. ಬಳಕೆದಾರರಿಗೆ ಆರ್1 ವರ್ಶನ್ ತಕ್ಷಣದಿಂದಲೇ ಲಭ್ಯವಿದೆ. ಡೀಪ್‌ಸೀಕ್ ಬಳಸಲು ಯಾವುದೇ ನಿರ್ಬಂಧಗಳಿಲ್ಲ, ಮಿತಿಗಳಿಲ್ಲ. ಎಲ್ಲವೂ ಉಚಿತ.

ಡೀಪ್ ಸೀಕ್ ಆಯಪ್ ಸ್ಟೋರ್ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಡೀಪ್‌ಸೀಕ್ ಸರ್ಚ್ ಮಾಡಿ ಅಧಿಕೃತ ಆಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು ವೆಬ್ ಬಳಕೆಗೆ ಡೀಪ್‌ಸೀಕ್.ಕಾಂ ಕ್ಲಿಕ್ ಮಾಡಿಕೊಳ್ಳಬೇಕು. ಬಳಿಕ ಗೂಗಲ್ ಖಾತೆ ಮೂಲಕ ಲಾಗಿನ್ ಆಗಬೇಕು. ಚಾಟ್‌ಜಿಪಿಟಿ ರೀತಿಯ ಇಂಟರ್‌ಫೇಸ್ ನಿಮಗೆ ದೊರೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries