ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡುಬಂದ ಕಾರಣ, ಕೋಳಿ ಫಾರ್ಮ್‌ಗಳು ಮತ್ತು ಕೋಳಿ ಮಾರಾಟ ಕೇಂದ್ರಗಳಿಂದ ಸಂಗ್ರಹಿಸಲಾದ ಕೋಳಿಗಳ ಮಾದರಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
'ಜಿಲ್ಲೆಯಲ್ಲಿ ಹಕ್ಕಿ ಜ್ವರದಿಂದ ಕಾಗೆಗಳು ಬಲಿಯಾದ ಬಳಿಕ, ಅಧಿಕಾರಿಗಳು ಇತರ ಪಕ್ಷಿಗಳ ಸುಮಾರು 48 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಶುಕ್ರವಾರ ಬಂದ ಪರೀಕ್ಷಾ ವರದಿಯಲ್ಲಿ ಹಕ್ಕಿಜ್ವರದ ಸೋಂಕು ಇರುವುದು ದೃಢಪಟ್ಟಿಲ್ಲ' ಎಂದು ಪಶುಸಂಗೋಪನೆ ಉಪ ಆಯುಕ್ತ ಡಾ. ಶ್ರೀಧರ್ ಶಿಂಧೆ ಹೇಳಿದರು.
'ಅಲ್ಲದೇ, ಜಿಲ್ಲೆಯ ಇತರ ಸ್ಥಳಗಳಿಂದಲೂ ಕೋಳಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಆ ವರದಿಯ ಫಲಿತಾಂಶ ಕೂಡ ನಕಾರಾತ್ಮಕವಾಗಿ ಬಂದಿದ್ದು, ಆ ಮೂಲಕ ಕೋಳಿಗಳಲ್ಲಿ ಹಕ್ಕಿ ಜ್ವರದ ಸೋಂಕು ಇಲ್ಲವೆಂದು ದೃಢಪಟ್ಟಿದೆ' ಎಂದು ಅವರು ತಿಳಿಸಿದರು.





