ನವದೆಹಲಿ: ಚುನಾವಣಾ ಆಯೋಗವು 'ರಾಷ್ಟ್ರೀಯ ಮತದಾರರ ದಿನಾಚರಣೆ'ಯಂದು ತನಗೆ ತಾನೇ ಅಭಿನಂದನೆ ಸಲ್ಲಿಸಿಕೊಂಡರೂ, ಅದು ಈಗ ಕೆಲಸ ಮಾಡುತ್ತಿರುವ ಬಗೆಯು ಸಂವಿಧಾನದ ಅಣಕದಂತೆ ಇದೆ ಎಂಬ ವಾಸ್ತವವನ್ನು ಮರೆಮಾಚಲು ಆಗುವುದಿಲ್ಲ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದಾಗಿ ಕಳೆದ ದಶಕದ ಅವಧಿಯಲ್ಲಿ ಚುನಾವಣಾ ಆಯೋಗದ ವೃತ್ತಿಪರತೆ ಹಾಗೂ ಸ್ವಾತಂತ್ರ್ಯವು ಬಹಳ ಕುಗ್ಗಿದೆ ಎಂದು ಕೂಡ ಕಾಂಗ್ರೆಸ್ ಟೀಕಿಸಿದೆ.
'ಚುನಾವಣಾ ಆಯೋಗದ ಸಾಂಸ್ಥಿಕ ನಿಷ್ಠೆಯು ಕಳೆದ ಹತ್ತು ವರ್ಷಗಳಲ್ಲಿ ಹಾಳಾಗಿರುವುದು ಗಂಭೀರ ಕಳವಳದ ಸಂಗತಿ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪ್ರತಿ ವರ್ಷ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನ ಎಂದು ಆಚರಿಸಲಾಗುತ್ತದೆ.
'ಆಯೋಗದ ಕೆಲವು ತೀರ್ಮಾನಗಳನ್ನು ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಹರಿಯಾಣ, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳ ಬಗ್ಗೆ ಎತ್ತಿದ ಕಳವಳಗಳಿಗೆ ಆಯೋಗ ತಳೆದ ನಿಲುವು ಆಘಾತಕಾರಿ ಅನ್ನುವಷ್ಟು ಪಕ್ಷಪಾತಿಯಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಎಕ್ಸ್ ಮೂಲಕ ಹೇಳಿದ್ದಾರೆ.
-ರಾಜೀವ್ ಕುಮಾರ್, ಮುಖ್ಯ ಚುನಾವಣಾ ಆಯುಕ್ತಜನರಲ್ಲಿ ಭೇದ-ಭಾವ ಮೂಡಿಸುವಂತಹ ಪ್ರಚಾರವನ್ನು ರಾಜಕೀಯ ಪಕ್ಷಗಳು ಮಾಡಕೂಡದು. ಇದು ಯುವಜನರನ್ನು ದಿಕ್ಕು ತಪ್ಪಿಸುತ್ತದೆ.





