ಬದಿಯಡ್ಕ: ಕೇರಳ ತುಳು ಅಕಾಡೆಮಿ ಕಾಸರಗೋಡು ಹಾಗೂ ಶ್ರೀಮಜ್ಜಗದ್ಗುರು ಶ್ರೀಎಡನೀರು ಮಠದ ಜಂಟಿ ಆಶ್ರಯದಲ್ಲಿ ತುಳುನಾಡಿನ ಹೆಮ್ಮೆಯ ದೈವ ನರ್ತಕರು ಮತ್ತು ಪಾದ್ಡನ ಕಲಾವಿದರಿಗೆ ಅಭಿನಂದನಾ ಸಮಾರಂಭ ಜ.26 ರಂದು ಭಾನುವಾರ ಅಪರಾಹ್ನ 2 ರಿಂದ ಶ್ರೀಎಡನೀರು ಮಠದ ಸಭಾ ಭವನದಲ್ಲಿ ಆಯೋಜಿಸಲಾಗಿದೆ.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಉದುಮ ಶಾಸಕ ವಕೀಲ ಸಿ.ಎಚ್.ಕುಂಞಂಬು, ಜಿಲ್ಲಾಧಿಕಾರಿ ಇನ್ಭಾಶೇಖರ್ ಕೆ., ಉದ್ಯಮಿ ಸದಾಶಿವ ಶೆಟ್ಟಿ ಕುಳೂರು, ಚೆಂಗಳ ಗ್ರಾ.ಪಂ.ಅಧ್ಯಕ್ಷ ಖಾದರ್ ಬದ್ರಿಯಾ, ಮೀಂಜ ಗ್ರಾ.ಪಂ.ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ರಾಜ್ಯ ಶಿಶುಕ್ಷೇಮ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಎಂ.ಎ.ಕರೀಂ, ಚೆಂಗಳ ಗ್ರಾ.ಪಂ.ಸದಸ್ಯರಾದ ಸಲೀಂ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಜೈ ತುಳುನಾಡ್ ಸಂಘಟನೆಯ ಕಾರ್ಯದರ್ಶಿ ಹರಿಕಾಂತ್ ಕೆ., ಕೇರಳ ತುಳು ಅಕಾಡೆಮಿ ಸದಸ್ಯರಾದ ಅಜಿತ್ ಎಂ.ಸಿ.ಲಾಲ್ ಬಾಗ್, ಉದಯ ಸಾರಂಗ್, ಕೃಷ್ಣವೇಣಿ ಬಿ. ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಈ ಸಂದರ್ಭ ದೈವನರ್ತಕರು ಹಾಗೂ ಕಲಾವಿದರುಗಳಾದ ಲಕ್ಷ್ಮಣ ಅಲಿಯಾಸ್ ಕಾಂತ ಕಣಂದೂರು, ಸೇಸಪ್ಪ ನಲಿಕೆ ಕಡಂಬಾರ್, ಗಣೇಶ್ ಎಸ್ ಮಾರು ಸುಣ್ಣಾಡ, ಚಿಪ್ಪಾರ್, ಕೃಷ್ಣ ಪಣಿಕ್ಕರ್ ಆದೂರು, ಕೃಷ್ಣ ಕಲೇಪಾಡಿ ಅಡೂರು, ಕರಿಯ ಕಲೇಪಾಡಿ ಅಡೂರು, ಶಿವಪ್ಪ ಕುಂಞರ ನಲಿಕೆ ಕುಡಾಲ್, ಡೀಕಯ್ಯ ಪರವ ಇಚ್ಲಂಪಾಡಿ, ಪೊಡಿಯ ನಲಿಕೆ ಉಳಿಯತ್ತಡ್ಕ, ಕುಞ್ಞ ಕಲೇಪಾಡಿ ಅಡೂರ್, ಬಾಲಕೃಷ್ಣ ಮಧೂರು, ಪೂವಪ್ಪ ಪರವ, ಬಾಬು ನಲಿಕೆ ಕುಡಾಲ್, ರಾಜೇಶ್ ಎಸ್ ಮಾರು, ಐತಪ್ಪ ನಲಿಕೆ, ಹೇರೂರು, ಮಧುಸೂದನ ಕಲೇಪಾಡಿ ಕಾನತ್ತೂರು, ಸಂಜೀವ ನಲಿಕೆ ಕನ್ನೆಪ್ಪಾಡಿ, ರಾಮ ಖಂಡಿಗೆ, ಗೋಪಾಲಕೃಷ್ಣ ಕಿನ್ವಾಲ್ ಕುಡಾಲು, ಚಂದ್ರನ್ ಪಣಿಕ್ಕರ್ ಕೂಡ್ಲು, ರಾಜೇಶ್ ಕಲೇಪಾಡಿ ಕಳೇರಿ, ಸುರೇಂದ್ರನ್ ಪಣಿಕ್ಕರ್ ಕಾಸರಗೋಡು, ಕೇಶವ ಇಚ್ಲಂಗೋಡು, ಕಮಲ ಜೋಡುಕಲು(ಪಾದ್ಡನ ಕಲಾವಿದೆ), ಐತಪ್ಪ ನಲಿಕೆ ವರ್ಕಾಡಿ, ಸುಂದರಿ ಸಜಂಕಿಲ(ಪಾದ್ಡುಇನ ಕಲಾವಿದೆ), ಬಿಜು ಕಲೇಪಾಡಿ ಪಾದೂರು, ರೋಹಿಣಿ ನಾರಾಯಣ ಪೈವಳಿಕೆ (ಪಾದ್ಡನ ಕಲಾವಿದೆ), ರಾಮ ನಲಿಕೆ ಕನಿಯಾಲ, ಸರಸ್ವತಿ ಮಂಗಲ್ಪಾಡಿ (ಪಾಡ್ದನ ಕಲಾವಿದೆ), ಬಾಬು ಖಂಡಿಗೆ, ಕಮಲಾ ಪಡ್ರೆ (ಪಾಡ್ದನ ಕಲಾವಿದೆ), ರಾಜು ಕಲೇಪಾಡಿ ಪಾದೂರು, ಜಯಂತಿ ಆರಿಕ್ಕಾಡಿ (ಪಾಡ್ದನ ಕಲಾವಿದೆ), ಜನಾರ್ದನ ಪರವ ದೈವಿಕ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಬಳಿಕ ಸಂಜೆ 5 ರಿಂದ ಸಾಂಸ್ಕøತಿಕ ವೈವಿಧ್ಯಗಳ ಪ್ರದರ್ಶನ ನಡೆಯಲಿದೆ.



