ಮಂಜೇಶ್ವರ: ಧಾರ್ಮಿಕ ಕೇಂದ್ರಗಳು ಬೆಳೆದಾಗ ಸಮಾಜ ಸುದೃಢವಾಗುವುದು. ತ್ಯಾಗ ಎಲ್ಲಿದೆಯೋ ಅಲ್ಲಿ ಭಕ್ತಿ ನೆಲೆಸುವುದು. ದೇಶದ ಹಿರಿಮೆಗೆ ಮತ್ತು ಸಿರಿವಂತಿಕೆಗೆ ಧಾರ್ಮಿಕ ಕ್ಷೇತ್ರಗಳು ಅಪಾರ ಕೊಡುಗೆ ನೀಡಿದೆ. ನಮ್ಮೂರಿನ ದೈವಸ್ಥಾನ, ದೇವಸ್ಥಾನ, ಮಂದಿರಗಳು ಬೆಳಗಿದರೆ ದೇಶ ಬೆಳಗಿದಂತೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಅವರು ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದ ಬ್ರಹ್ಮಕಲಶೋತ್ಸವದಂಗವಾಗಿ ಬುಧವಾರ ಬೆಳಗ್ಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಯುವ ಸಮಾಜ ಜಾಗೃತವಾದರೆ ದೇಶ ಬೆಳಗಿದಂತೆ, ಮಾನವೀಯ ಮೌಲ್ಯಗಳು ಧಾರ್ಮಿಕ ಕೇಂದ್ರಗಳನ್ನು ಎತ್ತಿ ಹಿಡಿಯುತ್ತದೆ, ಎಲ್ಲಿ ಮಾತೃ ಶಕ್ತಿ ಜಾಗೃತರಾಗುತ್ತಾರೋ ದೇಶ ಸುದೃಢವಾಗಲು ಸಾಧ್ಯ ಎಂದು ಆಶೀರ್ವಚನ ನೀಡಿದರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಧರ್ಮಶ್ರದ್ಧೆಗಳು ಇರುವಲ್ಲಿ ಅಪಾಯವಿಲ್ಲ, ಧಾರ್ಮಿಕ ಕೇಂದ್ರಗಳನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮವಹಿಸಿದಾಗ ಉತ್ತಮ ಸಮಾಜ ಮೂಡಿ ಬರಲು ಸಾಧ್ಯ ಎಂದು ತಿಳಿಸಿರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿಗಳು ಕುಡುಪು, ಬ್ರಹ್ಮಶ್ರೀ ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ, ಬ್ರಹ್ಮಶ್ರೀ ವೇದಮೂರ್ತಿ ರವೀಶ್ ತಂತ್ರಿ ಕುಂಟಾರು ಗೌರವ ಉಪಸ್ಥಿತರಿದ್ದರು.
ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಆಡಳಿತ ಟ್ರಸ್ಟ್ ನ ಅಧ್ಯಕ್ಷ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಶಂಕರನಾರಾಯಣ ಭಟ್ ಬಜಾಲ್, ಕೇರಳ ಮಲಬಾರ್ ದೇವಸ್ವಂ ಬೋರ್ಡ್ ನ ಸದಸ್ಯ ಶಂಕರ ರೈ ಮಾಸ್ತರ್, ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡದ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಉದ್ಯಮಿ ಸಂತೋಷ್ ಕುಮಾರ್ ಬೋಳಿಯಾರ್, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬೈ ಅಧ್ಯಕ್ಷ ಸೂರ್ಯಕಾಂತ್ ಜಯ ಸಿ ಸುವರ್ಣ ಸುಣ್ಣಾರಬೀಡು, ಬಲ್ಲಂಗುಡೇಲು ಪಾಡಾಂಗರೆ ಭಗವತೀ ಕ್ಷೇತ್ರದ ಜಯರಾಮ ಬಲ್ಲಂಗುಡೇಲು, ಚಿಪ್ಪಾರು ಅಮ್ಮೇರಿ ಗರಡಿಯ ಆಡಳಿತ ಮೊಕ್ತೆಸರ ಅಶೋಕ್ ಎಂ.ಸಿ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಮ್, ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಸತೀಶ ಶೆಟ್ಟಿ ಕುಡಾಲ್, ಕಡಂಬಾರ್ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೆಸರ ಎಸ್ ಎನ್ ಕಡಂಬಾರು, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕುಂಜತ್ತೂರು, ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಕಾಸರಗೋಡು ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಸುರತ್ಕಲ್ ಸಬ್ ಇನ್ಸ್‍ಪೆಕ್ಟರ್ ಶಶಿಧರ ಶೆಟ್ಟಿ ಜಮ್ಮದಮನೆ, ದಡ್ಡಂಗಡಿ ಶ್ರೀ ಮಹಾವಿಷ್ಣು ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ದಡ್ಡಂಗಡಿ ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಈ ವೇಳೆ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿಗಳು ಕುಡುಪು ಇವರಿಗೆ ಸನ್ಮಾನ, ದೈವ ಕ್ಷೇತ್ರದ ಕೋಶಾಧಿಕಾರಿ ನಾರಾಯಣ ರಾವ್, ಪಾಕ ತಜ್ಞ ಕೃಷ್ಣ ಹೊಳ್ಳ, ಕೃಷಿಕರು ಹಾಗೂ ಕೂಡು ಕುಟುಂಬವನ್ನು ನಡೆಸುತ್ತಿರುವ ತ್ಯಾಂಪಣ್ಣ ಶೆಟ್ಟಿ ಅಂಗಡಿದಾರು, ಕೃಷಿಕರಾದ ವಸಂತಿ ಅಪ್ಪಯ್ಯ ಪೂಂಜಾ ಮಾನೂರು, ಬಾಲಕೃಷ್ಣ ಭಂಡಾರಿ ದಡ್ಡoಗಡಿ, ದೈವ ನರ್ತಕ ರಾಜೇಶ್ ಮಾರು ಇವರಿಗೆ ಗೌರವಾರ್ಪಣೆ ನಡೆಯಿತು. ಮಧ್ಯಾಹ್ನ ಸಾಂಸ್ಕøತಿಕ ಕಾರ್ಯಕ್ರಮ ಲವಾನಂದ ಎಲಿಯಾಣ ಬಳಗದ ರಾಗ ಸಂಗೀತ ತಂಡದಿಂದ ಭಕ್ತಿಗಾನ ಸುಧಾ, ಬಳಿಕ ಈಶ್ವರ ನಾಯ್ಕ ಮತ್ತು ಮನೆಯವರು ಪಜಂಗಾರ್ ಪ್ರಾಯೋಜಕತ್ವದಲ್ಲಿ ಕಲಾರತ್ನ ಶಂನಾಡಿಗ ಕುಂಬ್ಳೆ ಇವರಿಂದ ಹರಿಕಥಾ ಸತ್ಸಂಗ ನಡೆಯಿತು. ರಾತ್ರಿ ತ್ರಿಶೂಲ್ ಫ್ರೆಂಡ್ಸ್ ಕ್ಲಬ್ ಬಾಳಿಯೂರು ಸಂತಡ್ಕ ಪ್ರಾಯೋಜಕತ್ವದಲ್ಲಿ ಬೆನಕ ಆಟ್ರ್ಸ್ ಕುಡ್ಲ ಕಲಾವಿದರಿಂದ ಪೊರಿಪುದಪ್ಪೆ ಜಲದುರ್ಗೆ ಎಂಬ ಭಕ್ತಿಪ್ರಧಾನವಾದ ಪೌರಾಣಿಕ ತುಳು ನಾಟಕ ಪ್ರದರ್ಶನಗೊಂಡಿತು. ಬೆಳಗ್ಗೆ 8 ರಿಂದ 8.30 ರ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಅರಸು ಸಂಕಲ, ಶ್ರೀ ಧೂಮಾವತಿ ಬಂಟ, ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಕೊರತಿ - ಗುಳಿಗ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಮತ್ತು ಪ್ರಸನ್ನ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

.jpg)
.jpg)
.jpg)
.jpg)
