ಮಧೂರು: ಉಳಿಯ ಶ್ರೀ ಧನ್ವಂತರಿ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ವರ್ಷಂಪ್ರತಿ ನಡೆದು ಬರುವ ಬಯಲು ಕೋಲ ಮಹೋತ್ಸವವು ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು.
ಕ್ಷೇತ್ರದಲ್ಲಿ ರುದ್ರಾಭಿಷೇಕ ಗಣಪತಿ ಹವನ, ಧನ್ವಂತರಿ ಪೂಜೆ, ಸಂಜೆ ಕಾರ್ತಿಕ ಪೂಜೆ ನಡೆಯಿತು. ಕ್ಷೇತ್ರದಿಂದ ಭಂಡಾರ ಹೊರಟು ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ಮತ್ತು ದೈವದ ಕೋಲ ನಡೆಯಿತು. ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ ವಿಷ್ಣುಮೂರ್ತಿ ಸೇವಾ ಸಮಿತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವು ಜರುಗಿತು.

.jpg)
.jpg)
