ಮುಳ್ಳೇರಿಯ: ಹಲವು ಶತಮಾನಗಳ ಇತಿಹಾಸ ಪರಂಪರೆಗಳನ್ನು ಹೊಂದಿರುವ ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಸುಮಾರು 351 ವರ್ಷಗಳ ಬಳಿಕ ಜ.19 ರಿಂದ 24 ರ ವರೆಗೆ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಜ.19ರಂದು ಬೆಳಿಗ್ಗೆ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಿಂದ ಸಾಮೂಹಿಕ ಪ್ರಾರ್ಥನೆಯೊಂದಿಗೆ ದೀಪವನ್ನು ಬೆಳಗಿಸಿ ವಾದ್ಯಷೋಷಗಳೊಂದಿಗೆ ದೀಪವನ್ನು ಭಗವತೀ ಕ್ಷೇತ್ರಕ್ಕೆ ತರಲಾಯಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ಕುಂಟಾರು ರವೀಶ ತಂತಿಯವರಿಗೆ ಪೂರ್ಣ ಕುಂಭ ಸ್ವಾಗತ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸ್ವಾಮೀಜಿ ಸರಸ್ವತಿ ಮಂಟಪ ಉದ್ಘಾಟಿಸಿದ ಬಳಿಕ ಧ್ವಜಾರೋಹಣ, ಉತ್ಸವ ಆರಂಭಗೊಂಡಿತು. ದೈವಸ್ಥಾನಕ್ಕೆ ಸಂಬಂಧಿಸಿದ ತರವಾಡು ಮನೆಗಳಿಂದ ಹೊರೆಕಾಣಿಕೆ ಮೆರವಣಿಗೆ, ಚಿನ್ಮಯಾ ಮಿಶನ್ ಕಾಸರಗೋಡು ಇವರಿಂದ ಗೀತಾಪಾರಾಯಣ, ಮಧ್ಯಾಹ್ನ ನಂತರ ಪುನ್ನಕ್ಕಾಲ್ ಭಗವತಿ, ಉಚ್ಚೂಳಿ ಕಡವತ್ ಭಗವತಿ, ಆಯಿಟ್ಟಿ ಭಗವತಿ ಎಂಬಿ ಮೂರು ಭಗವತಿಗಳ ತೊಡಂಙಲ್, ವೈರಾಪುರತ್- ವಡಕ್ಕಾನ್ ಕೋಡಿ ದೈವದ ವೆಳ್ಳಾಟ, ಸಂಜೆ ಚಳ್ಳಂಗೋಡು ದೈವಸ್ಥಾನದಿಂದ ಭÀಂಡಾರದ ಆಗಮನ, ರಾತ್ರಿ ಕುಂಟಾರು ಚಾಮುಂಡಿ ದೈವದ ತೊಡಂಙಳ್, ಕಲ್ಲಂಗರ ಚಾಮುಂಡಿ ತೊಡಂಙಳ್, ಮೇಚೇರಿ ಚಾಮುಂಡಿ ತೊಡಂಙಳ್, ವಿಷ್ಣುಮೂರ್ತಿ ತೊಡಂಙಳ್, ಅಸುರಾಳನ್ ದೈವದ ವೆಳ್ಳಾಟ, ಭಗವತಿ ದೈವದ ಸ್ತೋತ್ರ, ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಚಂದ್ರಮಾನ್ ದೇವರ ಮನೆಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ ಕಲಾರತ್ನ ಶಂನಾ ಅಡಿಗ ಅವರ ಶಿಷ್ಯೆ ಪೂಜಾ ವಾಸುದೇವ ಐಲ್ ಅವರಿಂದ ಹರಿಕಥೆ, ಶಾರದಾಂಬಾ ಮ್ಯೂಸಿಕಲ್ಸ್ ಕೈತ್ತೋಡು ಅವರಿಂದ ಭಕ್ತಿಗಾನಸುಧಾ, ಸಂಜೆ ಸಾಂಸ್ಕøತಿಕ ಸಭೆ, ಕೊಯಕೂಡ್ಲು ಪ್ರಾದೇಶಿಕ ಸಮಿತಿಯಿಂದ, ಮಂಞಂಪಾರೆ ಪ್ರಾದೇಶಿಕ ಸಮಿತಿಯಿಂದ ಹೊರೆಕಾಣಿಕೆ ಸಮರ್ಪಣೆ, ನಾಟ್ಯ ಮಂಟಪ ಮಧೂರು ಅವರಿಂದ ನಾಟ್ಯಾರ್ಚನೆ, ರಾತ್ರಿ ಮಹಿಳಾ ಸಮಿತಿಯಿಂದ ಮೆಗಾ ತಿರುವಾದಿರ, ವೈಕಂ ವಿಜಯಲಕ್ಷ್ಮಿ ಅವರಿಂದ ಮ್ಯೂಸಿಕಲ್ ನೈಟ್ ನಡೆಯಿತು.

.jpg)
.jpg)
