HEALTH TIPS

ಕಾಸರಗೋಡಿಗೆ ಹೆಮ್ಮೆ ತಂದ ಸೀಮಾ ರಂಜಿತ್‍ಗೆ ಹದಿಮೂರು ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್

ಕಾಸರಗೋಡು: ಕಾಞಂಗಾಡಿನ ಕಾಯರ್ಥಾಯ ಮನೆತನದ ರಂಜಿತ್ ಅವರ ಧÀರ್ಮಪತ್ನಿ ಸೀಮಾ ರಂಜಿತ್ ಶತಮಾನಗಳ ಇತಿಹಾಸ ಹೊಂದಿರುವ ದೇಶದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ಸಂಸ್ಕøತ ಎಂ.ಎ. ಪದವಿ ವ್ಯಾಸಂಗ ಮಾಡಿ ಪ್ರಥಮ ರ್ಯಾಂಕ್‍ನೊಂದಿಗೆ ಹದಿಮೂರು ಚಿನ್ನದ ಪದಕಗಳು ಹಾಗೂ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ.  ಅಲಂಕಾರ ಶಾಸ್ತ್ರ, ನ್ಯಾಯ ಶಾಸ್ತ್ರ, ಹಸ್ತಪ್ರತಿ ಶಾಸ್ತ್ರ, ಸಾಂಖ್ಯ ಹಾಗೂ ಚಾರ್ವಾಕ ದರ್ಶನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಅತಿ ಹೆಚ್ಚು ಅಂಕ ಗಳಿಸಿದ್ದಲ್ಲದೇ ಜರ್ಮನ್ ಮತ್ತು ರಷ್ಯನ್ ಭಾಷಾ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. ಒಳ್ಳೆಯ ಗಾಯಕಿ ಹಾಗೂ ನಿರೂಪಕಿಯಾಗಿರುವ ಸೀಮಾ ಅವರು ಪೆರಿಯ ಗೋಕುಲಂ ಗೋಶಾಲಾ ಪರಂಪರಾ ವಿದ್ಯಾಪೀಠದ ಸದಸ್ಯೆಯೂ ಆಗಿದ್ದಾರೆ. ಪ್ರತಿಷ್ಠಿತ ಕುಮಟಾದ ಕಮಲಾ ಬಾಳಿಗಾ ಕಾಲೇಜಿನಲ್ಲಿ ಬಿ. ಎಡ್. ವ್ಯಾಸಂಗ ಮಾಡಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುವ ಭಗವದ್ಗೀತಾ ಕಂಠಪಾಠ ಸ್ಪರ್ಧೆಗಳಲ್ಲಿಯೂ ಜಿಲ್ಲಾ ಸ್ತರಕ್ಕೆ ಆಯ್ಕೆಯಾಗಿದ್ದರು. ಕೇರಳ ರಾಜ್ಯದ ಬ್ರಾಹ್ಮಣ ಸಂಘದವರು ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಾಞಂಗಾಡ್ ಸಂಘದ ವತಿಯಿಂದ ಪುರಾಣ ರಸಪ್ರಶ್ನೆ ಹಾಗೂ ಭಾವಗೀತೆ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ ತಿರುವನಂತಪುರದಲ್ಲಿ ನಡೆದ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು  ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದ ಪ್ರತಿಷ್ಠಿತ ರಾಷ್ಟ್ರೋತ್ಥಾನ ಸಂಸ್ಥೆಯ ವಿದ್ಯಾಕೇಂದ್ರಗಳಲ್ಲಿ ಬೌದ್ಧಿಕ ನೀಡಲು ಅವಕಾಶ ದೊರೆತದ್ದು ಹೆಮ್ಮೆಯ ವಿಚಾರವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಳಚೆ ಗ್ರಾಮದಲ್ಲಿರುವ ಶ್ಯಾಮ್ ಹೆಗಡೆ, ಶಿಲ್ಪಾ ಹೆಗಡೆ ಇವರ ಏಕೈಕ ಪುತ್ರಿಯಾಗಿರುವ ಸೀಮಾ ಮೈಸೂರು ವಿಶ್ವವಿದ್ಯಾನಿಲಯದಿಂದ ಈ ಗೌರವವನ್ನು ಗಳಿಸಿ ಚಿನ್ನದ ಹುಡುಗಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries