ಮಂಜೇಶ್ವರ: ರಾಷ್ಟ್ರೀಯ ಮತದಾನ ದಿನದ ಭಾಗವಾಗಿ ವರ್ಕಾಡಿ ಪಂಚಾಯತಿ ತಿಮ್ಮಂಗೂರು ಪರಿಶಿಷ್ಟ ವರ್ಗ ಊರುಕೂಟದ ಅಧ್ಯಕ್ಷ ಹಾಗೂ ಹಿರಿಯ ಮತದಾರರನ್ನು ಮಂಗಳವಾರ ಸನ್ಮಾನಿಸಲಾಯಿತು. ಮಂಜೇಶ್ವರ ಮತದಾರರ ನೋಂದಣಿ ಅಧಿಕಾರಿ, ಉಪಜಿಲ್ಲಾಧಿಕಾರಿ ಕೆ ರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚುನಾವಣಾ ಅಧಿಕಾರಿ,ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಿಮ್ಮಂಗೂರು ಪ್ರದೇಶದ ಊರುಕೂಟ ಅಧ್ಯಕ್ಷ ಐತಪ್ಪ ಹಾಗೂ ಹಿರಿಯ ಮತದಾರರ ಐತ ತಿಮ್ಮಂಗೂರು, ಸುಶೀಲ, ಗೌರಿಮೂಲೆ ಬಾಬು ಕೋಣಿಬೈಲು ಎಂಬವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್. ಭಾರತಿ, ವಾರ್ಡ್ ಸದಸ್ಯ ಇಬ್ರಾಹಿಂ, ಮತ್ತು ಮಂಜೇಶ್ವರ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ, ತಹಸೀಲ್ದಾರ್ ಎಂ. ಶ್ರೀನಿವಾಸ್ ಮಾತನಾಡಿದರು. ಉಪ ತಹಶೀಲ್ದಾರ್‍ಗಳಾದ ಮುಹಮ್ಮದ್ ಹಾರಿಸ್ ಮತ್ತು ಬದ್ರುಲ್ ಹುದಾ, ವರ್ಕಾಡಿಡಿ ಗ್ರಾಮಾಧಿಕಾರಿ ಸಪ್ನಾ, ಬುಡಕಟ್ಟು ವಿಸ್ತರಣಾಧಿಕಾರಿ ಕೆ. ವೀಣಾ ನಾರಾಯಣ, ಸಮಾಜ ಸೇವಕಿ ಸೌಮ್ಯ, ಅಭಿಷೇಕ್, ಚುನಾವಣಾ ಇಲಾಖೆಯ ಅಧಿಕಾರಿಗಳಾದ ಧನೇಶ್ ಕೆ.ಟಿ, ಇಬ್ರಾಹಿಂ ಕೆ.ಎಂ, ಮೇನಕಾ ಟಿ.ಎಸ್. ಸುಕನ್ಯಾ, ಮತ್ತು ಮಂಜುನಾಥ, ಸ್ಥಳೀಯರು ಉಪಸ್ಥಿತರಿದ್ದರು. ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ಸಹಾಯಕ ಅಧಿಕಾರಿ ಕೆ.ವಿ. ರಾಘವನ್ ಸ್ವಾಗತಿಸಿ ಚುನಾವಣಾ ಇಲಾಖೆಯ ಗುಮಾಸ್ತ ಪಿ.ಜಿ. ಬಿನುಕುಮಾರ್ ವಂದಿಸಿದರು.

.jpg)
