ಬದಿಯಡ್ಕ : ಮುಂಡಿತ್ತಡ್ಕ ಸಮೀಪದ ಅರಿಯಪ್ಪಾಡಿ ಮಾಡದ ಈರ್ವರು ಉಳ್ಳಾಕ್ಲು ಹಾಗೂ ಪರಿವಾರ ದೈವಸ್ಥಾನದ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ ಮಂಗಳವಾರದಿಂದ ಆರಂಭಗೊಂಡಿದೆ. ಇದರ ಅಂಗವಾಗಿ ಮಾಡದ ಮಹಾದ್ವಾರದಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಕ್ಷೇತ್ರಕ್ಕೆ ಸಾಗಿ ಬಂತು. ಕ್ಷೇತ್ರ ಸಮಿತಿಯ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು, ಮಾತೃ ಸಮಿತಿಯವರನ್ನೊಳಗೊಂಡ ಮೆರವಣಿಗೆಯು ವಾದ್ಯ ವಾಲಗದೊಂದಿಗೆ ಸಾಗಿ ಬಂತು. ಬಳಿಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹವನ, ಉಗ್ರಾಣ ಮುಹೂರ್ತ, ಶ್ರೀ ದೈವಗಳ ಮಹಾ ತಂಬಿಲ ಜರಗಿತು. ಈ ಸಂದರ್ಭದಲ್ಲಿ ಈರ್ವರು ಉಳ್ಳಾಕ್ಲು ಮಹಿಳಾ ಭಜನಾ ಸಂಘದ ಉದ್ಘಾಟನೆ ಹಾಗೂ ಭಜನಾ ಸಂಕೀರ್ತನೆ ಜರಗಿತು.

.jpg)
.jpg)
