ಮಧೂರು: ವರ್ಷಂಪ್ರತಿ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ ಆಚರಿಸುವ ತಿರುವಾದಿರ ಮಹೋತ್ಸವ ಜ. 13 ರಂದು ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಅಸ್ರರ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಅಭಿಷೇಕ, ಉಷಃಪೂಜೆ, ನವಕಾಭಿಷೇಕ ಮಧ್ಯಾಹ್ನ ಪೂಜೆ ಸಂಜೆ ದೀಪಾರಾಧನೆ ರಾತ್ರಿ ಶ್ರೀ ಭೂತಬಲಿ ಉತ್ಸವ, ಭಜನೆ, ಮಹಾಪೂಜೆ ಕಾರ್ಯಕ್ರಮದೊಂದಿಗೆ ಸಂಪನ್ನವಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.





