ಮುಳ್ಳೇರಿಯ: ಶತಮಾನಗಳ ಇತಿಹಾಸ ಪರಂಪರೆಯುಳ್ಳ ಆದೂರು ಶ್ರೀ ಭಗವತಿ ದೈವಸ್ಥಾನದಲ್ಲಿ 315 ವರ್ಷಗಳ ಬಳಿಕ ಜ.19 ರಿಂದ ಆರಂಭಗೊಂಡ ಪೆರುಂಕಳಿಯಾಟ ಮಹೋತ್ಸವದ ಸಂಭ್ರಮ, ಸಡಗರದ ತಿರುಮುಡಿ ಏರುವ ಕಾರ್ಯಕ್ರಮದೊಂದಿಗೆ ನಿನ್ನೆ ಭಕ್ತಿ ಸಾಂದ್ರವಾದ ವಾತಾವರಣದಲ್ಲಿ ಸಂಪನ್ನಗೊಂಡಿತು. ಸಾವಿರಾರು ಭಕ್ತಾದಿಗಳನ್ನು ಸಾಕ್ಷ್ಯವಾಗಿರಿಸಿಕೊಂಡು ಮಾಂಗಲ್ಯ ಕನ್ನಿಕೆಯರೊಂದಿಗೆ, ಸ್ಥಾನಿಕ ಆಚಾರ್ಯ ವಾರಿಸುದಾರರನ್ನು ಸೇರಿಸಿಕೊಂಡು ಶುಭಮುಹೂರ್ತದಲ್ಲಿ ಒಂದೇ ಪೀಠದಲ್ಲಿ ಅಸೀನರಾಗಿರುವ ನಿತ್ಯ ಕನ್ನಿಕೆಯರಾಗಿರುವ ಶ್ರೀ ಪುನ್ನಕ್ಕಲ್ ಭಗವತೀ, ಶ್ರೀ ಉಚ್ಚುಳಿಕಡವತ್ ಭಗವತೀ, ಶ್ರೀ ಆಯಿಟ್ಟ ಭಗವತೀಯವರ ತಿರುಮುಡಿ ಏರುವುದು ನಡೆಯಿತು.
ಇದಕ್ಕೂ ಮುನ್ನ ಬೆಳಗ್ಗೆ 6 ಗಂಟೆಗೆ ಉಷ:ಪೂಜೆ, 7 ರಿಂದ ವೈರಾಪುರತ್ತ್ ವಡಕ್ಕಾನ್ ಕೋಡಿ ದೈವದ ಕೋಲೋತ್ಸವ, ಅಸುರಾಳನ್ ದೈವದ ಕೋಲೋತ್ಸವ, ಕಲ್ಲಂಗರ ಚಾಮುಂಡಿ ದೈವದ ಕೋಲೋತ್ಸವ, ಮೇಚ್ಚೇರಿ ಚಾಮುಂಡಿ ದೈವದ ಕೋಲೋತ್ಸವ, ವಿಷ್ಣುಮೂರ್ತಿ ದೈವದ ಕೋಲೋತ್ಸವ, ಮಲಂಗರ ದೈವದ ಕೋಲೋತ್ಸವ, ಕುಂಟಾರು ಚಾಮುಂಡಿ ದೈವದ ಕೋಲೋತ್ಸವ, ಗುಳಿಗ ದೈವದ ಕೋಲೋತ್ಸವ ನಡೆಯಿತು.
ಮಧ್ಯಾಹ್ನ 12.30 ಕ್ಕೆ ಮಧ್ಯಾಹ್ನ ಪೂಜೆ, ಕಲಶ ಮೆರವಣಿಗೆ ನಡೆಯಿತು. ದೈವಸ್ಥಾನಕ್ಕೆ ಸಂಬಂಧಪಟ್ಟ ಕಾಸರಗೋಡು ನೆಲ್ಲಿಕುಂಜೆ ಕಣ್ಣೀರನ್ ತರವಾಡು, ಕರಿಪ್ಯಾನ್ - ಕಿರಿಯಂ ಭಂಡಾರ ಮನೆ ತರವಾಡು, ಮೂತ್ತಿಲ್ಯಂ ತರವಾಡು ಎಂಬೀ ಮೂರು ತರವಾಡುಗಳಿಂದ ಮೀನಾಮೃತಕ್ಕಿರುವ ಮೀನ್ ಕೋವಾ ಮೆರವಣಿಗೆ ನಡೆಯಿತು. ಆ ಬಳಿಕ ಪುನ್ನಕ್ಕಾಲ್ ಭಗವತೀ ದೈವದ ಕೋಲೋತ್ಸವ, ಉಚ್ಚೋಳಿ ಕಡವತ್ತ್ ಭಗವತಿ ದೈವದ ಕೋಲೋತ್ಸವ, ಆಯಿಟ್ಟಿ ಭಗವತಿ ದೈವದ ಕೋಲೋತ್ಸವ, ತಿರುಮುಲ್ ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ 3 ರಿಂದ ಸಂಜೆ 6 ರ ವರೆಗೆ ಸಾಂಸ್ಕøತಿಕ ಸಮ್ಮೇಳನ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮಗದಂಗವಾಗಿ ಮಧ್ಯಾಹ್ನ 12 ಕ್ಕೆ ಸ್ಯಾಕ್ಸೋಫೆÇೀನ್ ವಾದನ, ಸಂಜೆ 6 ರಿಂದ ಕೈಕೊಟ್ಟಿಕ್ಕಳಿ, ರಾತ್ರಿ 7 ರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ರಾತ್ರಿ 11.50 ಕ್ಕೆ ಧ್ವಜಾವರೋಹಣ ನಡೆಯಿತು. ಜ.27 ಮತ್ತು 28 ರಂದು ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರ ಬಬ್ಬರಿಯ ಕ್ಷೇತ್ರದಲ್ಲಿ ಬಬ್ಬರಿಯ, ಮಾಣಿಚ್ಚಿ, ಗುಳಿಗ ದೈವದ ಕೋಲಗಳು ಆಚಾರ ಪ್ರಕಾರ ನಡೆಯಲಿದೆ.
ಪೆರುಂಕಳಿಯಾಟಕ್ಕೆ ಭಕ್ತ ಜನಸಾಗರ :
ಅತ್ಯಾಪೂರ್ವ ಹಾಗು ಸುದೀರ್ಘ ವರ್ಷಗಳ ಬಳಿಕ ನಡೆಯುತ್ತಿರುವ ಆದೂರು ಶ್ರೀ ಭಗವತೀ ದೈವಸ್ಥಾನದ ಪೆರುಂಕಳಿಯಾಟ ಮಹೋತ್ಸವ ವೀಕ್ಷಿಸಲು ಭÀಕ್ತ ಜನ ಸಾಗರವೇ ಹರಿದು ಬಂದಿದೆ. ಸುಮಾರು 351 ವರ್ಷಗಳ ಬಳಿಕ ನಡೆಯುತ್ತಿರುವ ಪೆರುಂಕಳಿಯಾಟ ಮಹೋತ್ಸವವನ್ನು ಕಾಣುವ ಕಾತರದಿಂದ ಜನಸಾಗರವೇ ಹರಿದು ಬಂದಿದ್ದು, ದೈವ ಕೋಲಗಳನ್ನು ವೀಕ್ಷಿಸಿ ಧನ್ಯತಾ ಭಾವದೊಂದಿಗೆ ಸಂಭ್ರಮಪಟ್ಟರು. ಅತ್ಯಾಪೂರ್ವವಾಗಿ ನಡೆಯುತ್ತಿರುವ ಈ ಉತ್ಸವವನ್ನು ವೀಕ್ಷಿಸಲು ಕಾಸರಗೋಡು ಜಿಲ್ಲೆ ಮಾತ್ರವಲ್ಲ, ಕರ್ನಾಟಕದ ವಿವಿಧ ಪ್ರದೇಶಗಳ ಭಕ್ತರು ಆಗಿಮಿಸಿದ್ದರು. ಮುಂಬಯಿ ಸಹಿತ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿ ಮಹೋತ್ಸವವನ್ನು ಕಣ್ತುಂಬಿಕೊಂಡರು.




.jpg)
.jpg)
.jpg)
