ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಎಂ ಗೋಪಾಲಕೃಷ್ಣ ಮುಂಡೋಳುಮೂಲೆ ಅವರ ಪದಗ್ರಹಣ ಕಾರ್ಯಕ್ರಮವು ಮುಳ್ಳೆರಿಯ ಗಣೇಶ ಕಲಾ ಮಂದಿರದಲ್ಲಿ ನಡೆಯಿತು. ಮಾಜಿ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ದೀಪ ಬೆಳಗಿಸಿ ಉದ್ಘಾಟಿಸಿದರು.
ನೇತಾರರಾದ ಎಂ ಸಂಜೀವ ಶೆಟ್ಟಿ, ಸುಧಾಮ ಗೋಸಾಡ, ರಾಮಪ್ಪ ಮಂಜೇಶ್ವರ, ಶಿವ ಕೃಷ್ಣ ಭಟ್, ಎನ್ ಸತೀಶ್, ಮಣಿಕಂಠ ರೈ ,ಶೈಲಜಾ ಭಟ್, ವಸಂತ ಶೆಟ್ಟಿ, ಈಶ್ವರ ಮಾಸ್ತರ್, ಥೋಮಸ್ ಬೆಳ್ಳೂರು,ಗೀತಾ ಬೆಳ್ಳೂರು ಚಿತ್ರಕಲ, ರೋಮನ್ ಡಿಸೋಸ, ಬಿಎಂಎಸ್ ನೇತರಾದ ಲೀಲ ಕೃಷ್ಣ, ಮುಳ್ಳೇರಿಯ ಸದಾಶಿವ, ಸಾಮಾಜಿಕ ಕಾರ್ಯಕರ್ತರಾದ ದೀನನಾಥ ಶೆಣೈ, ಹರೀಶ್ ಗೋಸಾಡ, ಜಯಚಂದ್ರ, ರಮೇಶ್ ಮೊದಲಾದ ನೇತಾರು ಭಾಗವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್ ಸ್ವಾಗತಿಸಿ, ರವೀಂದ್ರ ರೈ ಗೋಸಾಡ ವಂದಿಸಿದರು.




.jpg)
