ಕಾಸರಗೋಡು: ವಿದ್ಯಾನಗರ ಶ್ರೀಗೋಪಾಲಕೃಷ್ಣ ಸಂಗೀತ ಶಾಲೆಯ 28ನೇ ವರ್ಷಿಕೋತ್ಸವ ಜ. 19ರಂದು ಬೀರಂತಬೈಲಿನ ಲಲಿತಕಲಾ ಸದನದಲ್ಲಿ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಶುಭಾಶೀರ್ವಾದದೊಂದಿಗೆ ಕಾಯ್ಕ್ರಮ ನಡೆಯುವುದು. ಬೆಳಗ್ಗೆ 9.30ಕ್ಕೆ ದೀಪ ಪ್ರಜ್ವಲನೆ, 10ಕ್ಕೆ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಸಂಗೀತಚ್ನೆ ನಡೆಯುವುದು.
ಕಾಂತಾರ ಸಿನಿಮಾದ ವರಾಹರೂಪಂ ಖ್ಯಾತಿಯ ಸಾಯಿ ವಿಘ್ನೇಶ್ ಬಳಗದವರಿಂದ ಸಂಗೀತ ಕಛೇರಿ ನಡೆಯುವುದು.
ವಯಲಿನ್‍ನಲ್ಲಿ ವಿದ್ವಾನ್ ಕರೈಕಲ್ ವೆಂಕಟಸುಬ್ರಹ್ಮಣ್ಯನ್, ಮೃದಂಗದಲ್ಲಿ ವಿದ್ವಾನ್ ಎಂ.ಎಸ್ ವೆಂಕಟಸುಬ್ರಹ್ಮಣ್ಯನ್, ಘಟಂನಲ್ಲಿ ವಿದ್ವಾನ್ ರಾಜು ಉಣ್ಣಿಕೃಷ್ಣನ್ ಸಹಕರಿಸುವರು.





