ಕಾಸರಗೋಡು : ಜಿಲ್ಲಾ ಎಂಪ್ಲೊಯ್‍ಮೆಂಟ್ ಎಕ್ಸ್‍ಚೇಂಜ್‍ನಲ್ಲಿ ಕಾರ್ಯಚರಿಸುವ ಎಂಪೆÇ್ಲೀಯಬಿಲಿಟಿ ಸೆಂಟರ್ ನ ನೇತೃತ್ವದಲ್ಲಿ ಖಾಸಗಿ ಸಂಸ್ಥೆ ಗಳಲ್ಲಿ ಉದ್ಯೋಗ ಗಳಿಸಲು ಅವಕಾಶ ಕಲ್ಪಿಸಲಾಗಿದೆ. ಈ ತಿಂಗಳ 18ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕಾಸರಗೋಡು ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ನಲ್ಲಿ ಕಾರ್ಯಚರಿಸುವ ಹೊಸದುರ್ಗ ಟೌನ್ ಎಂಪ್ಲಾಯ್‍ಮೆಂಟ್ ಎಕ್ಸ್‍ಚೇಂಜ್‍ನಲ್ಲಿ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.
ಉದ್ಯೋಗ ಪಡೆಯಲು ಅಗತ್ಯವಾದ ಉದ್ಯೋಗ ಸಂದರ್ಶನ ತರಬೇತಿ, ಇಂಗ್ಲಿಷ್ ತರಗತಿಗಳು, ಸಾಫ್ಟ್ ಸ್ಕಿಲ್ ತರಬೇತಿ ಇತ್ಯಾದಿಗಳು ಒಂದು ಬಾರಿ ನೋಂದಣಿಯೊಂದಿಗೆ ಜೀವಮಾನದವರೆಗೆ ಉಚಿತವಾಗಿ ಎಂಪ್ಲೊಯಬಿಲಿಟಿ ಸೆಂಟರ್‍ನ ಮೂಲಕ ಲಭ್ಯವಾಗುವುದು. ಉದ್ಯೋಗ ಪಡೆಯಲು ಪ್ರತಿ ವಾರ ಖಾಸಗಿ ಕಂಪನಿಗಳಿಗೆ ಸಂದರ್ಶನವನ್ನೂ ನಡೆಸಲಾಗುವುದು. ಆಸಕ್ತ ಉದ್ಯೋಗಾರ್ಥಿಗಳು ಅದೇ ದಿನ ಬೆಳಗ್ಗೆ 10ಕ್ಕೆ ಪ್ರಮಾಣಪತ್ರಗಳ ಪ್ರತಿಗಳು ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ 250 ರೂಪಾಯಿ ಶುಲ್ಕವನ್ನು ಪಾವತಿಸಿ ನೋಂದಾವಣೆ ಮಾಡಬಹುದಾಗಿದೆ.ಎಸ್.ಎಸ್.ಎಲ್.ಸಿ ಯಿಂದ ಮೇಲ್ಪಟ್ಟ ಅರ್ಹತೆಯಿರುವ 18-35ರ ವಯೋಮಿತಿಯ ಉದ್ಯೋಗಾರ್ಥಿಗಳಿಗೆ ಭಾಗವಹಿಸಬಹುದು.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ (9207155700) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




