HEALTH TIPS

ದಾಖಲೆಗಳಿಲ್ಲದ ಭಾರತೀಯರ ಕಾನೂನುಬದ್ಧ ವಾಪಸಾತಿಗೆ ಭಾರತ ಸಿದ್ಧ: ಜೈಶಂಕರ್

ವಾಷಿಂಗ್ಟನ್: ಅಮೆರಿಕದಲ್ಲಿ ದಾಖಲೆಗಳಿಲ್ಲದೆ ವಾಸವಿರುವ ಭಾರತೀಯರನ್ನು ಕಾನೂನುಬದ್ಧವಾಗಿ ವಾಪಸ್‌ ಕರೆಸಿಕೊಳ್ಳಲು ಭಾರತ ಯಾcವಾಗಲೂ ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಅಮೆರಿಕದಿಂದ ಭಾರತಕ್ಕೆ ವಾಪಸ್‌ ಕರೆಸಿಕೊಳ್ಳಬಹುದಾದ ಭಾರತೀಯರ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

ಭಾರತದ ಪ್ರತಿಭೆ ವಿಶ್ವಮಟ್ಟದಲ್ಲಿ ಬೆಳಗಬೇಕು, ಭಾರತೀಯರ ಕೌಶಲಗಳು ಜಾಗತಿಕ ಮಟ್ಟದಲ್ಲಿ ಅವಕಾಶ ಪಡೆಯಬೇಕು ಎಂದು ಬಯಸುತ್ತೇವೆ. ಅದೇ ಸಮಯದಲ್ಲಿ ಸರ್ಕಾರವಾಗಿ ಕಾನೂನಿಗೆ ನಾವು ಹೆಚ್ಚು ಬೆಂಬಲ ನೀಡುತ್ತೇವೆ. ಅಕ್ರಮ ವಲಸೆ, ಅಕ್ರಮ ನಿವಾಸವನ್ನು ವಿರೋಧಿಸುತ್ತೇವೆ ಎಂದರು.

ಅಕ್ರಮ ಚಟುವಟಿಕೆಗಳು ಸಂಭವಿಸಿದಾಗ ಈ ರೀತಿಯ ಅನೇಕ ಕಾನೂನುಬಾಹಿರ ಚಟುವಟಿಕೆಗಳು ಅದರೊಂದಿಗೆ ಸೇರಿಕೊಳ್ಳುತ್ತವೆ, ಅದು ಅಪೇಕ್ಷಣೀಯವಲ್ಲ. ಇದು ದೇಶದ ಖ್ಯಾತಿಗೆ ಒಳ್ಳೆಯದಲ್ಲ. ಅಮೆರಿಕ ಅಥವಾ ಇತರ ಯಾವುದೇ ದೇಶದಲ್ಲಿ ಭಾರತೀಯರು ಅಕ್ರಮವಾಗಿ ನೆಲೆಸಿದ್ದರೆ, ಅವರು ಖಂಡಿತವಾಗಿಯೂ ನಮ್ಮ ಪ್ರಜೆಗಳೇ ಆಗಿದ್ದರೆ, ಅವರು ಭಾರತಕ್ಕೆ ಕಾನೂನುಬದ್ಧವಾಗಿ ಮರಳಲು ಸದಾ ಅವಕಾಶವಿದೆ ಎಂದು ಜೈಶಂಕರ್‌ ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕದಲ್ಲಿರುವ ಸುಮಾರು 1ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಗಡಿಪಾರು ಮಾಡಲು ಟ್ರಂಪ್‌ ಆಡಳಿತದೊಂದಿಗೆ ಭಾರತ ಕೆಲಸ ಮಾಡುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು,

ಗಡೀಪಾರು ಮಾಡುವುದು ಅಮೆರಿಕಕ್ಕೆ ಹೊಸತಲ್ಲ. ಒಂದು ನಿರ್ದಿಷ್ಟ ಚರ್ಚೆ ನಡಯುತ್ತಿದೆ. ಈ ವಿಚಾರದ ಬಗ್ಗೆ ನಮಗೆ ಕಳಕಳಿಯಿದೆ ಹಾಗೂ ನಾವು ಸ್ಥಿರವಾಗಿದ್ದೇವೆ. ಗಡೀಪಾರಿನ ಬಗ್ಗೆ ನಮ್ಮದೇ ಆದ ತತ್ವವನ್ನು ಹೊಂದಿದ್ದೇವೆ ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ರೂಬಿಯಯೊ ಅವರಿಗೂ ತಿಳಿಸಿದ್ದೇನೆ. ಒಂದು ವೀಸಾ ಪಡೆಯಲು 400 ದಿನದ ಅವಧಿ ತೆಗೆದುಕೊಂಡರೆ, ಈ ಸಂಬಂಧ ಸರಿಯಾಗಿರುತ್ತದೆ ಎಂದು ಭಾವಿಸವುದಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದೇನೆ ಇದನ್ನು ರೂಬಿಯೊ ಅವರೂ ಗಮನಿಸಿದ್ದಾರೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries